ರಾಜ್ಯದಲ್ಲಿಯೇ ಟಕ್ಕಳಕಿ ತಾಂಡಾ ಸೇವಾಲಾಲ ಕಾಳಿಕಾ ದೇವಿ ದೇವಸ್ಥಾನ ಪ್ರಸಿದ್ಧಿ ಪಡೆದಿದೆ : ಅರ್ಜುನ ರಾಠೋಡ

Oct 7, 2024 - 02:37
 0
ರಾಜ್ಯದಲ್ಲಿಯೇ ಟಕ್ಕಳಕಿ ತಾಂಡಾ ಸೇವಾಲಾಲ ಕಾಳಿಕಾ ದೇವಿ ದೇವಸ್ಥಾನ ಪ್ರಸಿದ್ಧಿ ಪಡೆದಿದೆ : ಅರ್ಜುನ ರಾಠೋಡ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ತಿಕೋಟ : ಕರ್ನಾಟಕ ರಾಜ್ಯದಲ್ಲಿಯೇ ಟಕ್ಕಳಕಿ ತಾಂಡಾದ ಸೇವಾಲಾಲ್ ಕಾಳಿಕಾ ದೇವಿ ದೇವಸ್ಥಾನ ಪ್ರಸಿದ್ಧಿ ಪಡೆದಿದ್ದು ಇಲ್ಲಿ ಬಂಜಾರ ಜನಾಂಗದ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದು ಶ್ಲಾಘನೀಯವಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ, ಕರ್ನಾಟಕ ರಾಜ್ಯ ಬಂಜಾರ ಮಹಾಸಭಾಧ್ಯಕ್ಷ ಅರ್ಜುನ ರಾಠೋಡ ಹೇಳಿದರು.

ತಾಲೂಕಿನ ಟಕ್ಕಳಕಿ ತಾಂಡಾ ನಂ-1 ರಲ್ಲಿ ಕಾಳಿಕಾದೇವಿ ದಸರಾ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಸಚಿವ ಎಂ ಬಿ ಪಾಟೀಲರು ನೀರಾವರಿ ಸಚಿವರಿದ್ದ ಕಾಲದಲ್ಲಿ ತಿಕೋಟಾ ತಾಲೂಕಿನಲ್ಲಿ ಸಂಪೂರ್ಣ ನೀರಾವರಿ ಮಾಡಿ ರೈತ ಬಾಂಧವರಿಗೆ ಶ್ರೀಮಂತ ಗೊಳಿಸಿದ್ದಾರೆ‌. ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದ ಬಂಜಾರ ಸಮಾಜ ತಮ್ಮ ಜಮೀನದಲ್ಲಿಯೇ ದ್ರಾಕ್ಷಿ. ದಾಳಿಂಬೆ. ಕಬ್ಬು. ಇತರೆ ಬೆಳೆ ಬೆಳೆದು ಇಲ್ಲಿಯೇ ಜೀವನೋಪಾಯ ನಡೆಸುವಂತೆ ಮಾಡಿರುವ ಎಂಬಿ ಪಾಟೀಲರಿಗೆ ಬಂಜಾರ ಸಮಾಜದ ಯಾವ ಕಾಲಕ್ಕೂ ಮರೆಯಬಾರದು ಎಂದರು. 

ಕಾಳಿಕಾದೇವಿ ದೇವಸ್ಥಾನಕ್ಕೆ ಈಗಾಗಲೇ 5 ಲಕ್ಷ ಅನುದಾನ ಮಂಜೂರಿಯಾಗಿದ್ದು, ಶಾಸಕರು ಸಚಿವರಾಗಿರುವ ಎಂ ಬಿ ಪಾಟೀಲರ ಗಮನಕ್ಕೆ ತಂದು ಇನ್ನೂ 20 ಲಕ್ಷ ಹೆಚ್ಚುವರಿಯಾಗಿ ಒದಗಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ಧೋಂಡಿರಂ ಮಹಾರಾಜರು ಸಾನಿಧ್ಯ ವಹಿಸಿದ್ದರು. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಧುಸೌಕರ್ ಜಾಧವ, ಎಪಿಎಂಸಿ ಮಾಜಿ ಸದಸ್ಯ ವಾಮನ್ ಚೌಹಾನ, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಪ್ಪ ಚಲವಾದಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಶಾಂತ ಜೆಂಡ, ಸಂಜೀವ್ ಪವಾರ, ರಮೇಶ ರಾಠೋಡ, ಸಂತೋಷ್ ರಾಠೋಡ, ಮೇಘು ದೀನು ರಾಠೋಡ, ಅಶೋಕ್ ರಾಮ ಜಿ. ರಾಠೋಡ, ಚಂದು ಕಾರ್ಬಾರಿ,ಬಾಳು ರಾಠೋಡ, ಉಪಸ್ಥಿತರಿದ್ದರು.

ಉತ್ಸವದ ಮುಖ್ಯ ರೂವಾರಿ ರವಿಕುಮಾರ್ ರಾಠೋಡ ಹಾಗೂ ದಿಲೀಪ್ ರಾಠೋಡ ಸ್ವಾಗತಿಸಿ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.