ಸಂಕ್ರಾಂತಿ ಹಬ್ಬಕ್ಕೆ ಹಾರರ್ ಥ್ರಿಲ್ಲರ್ ಟೆಡ್ಡಿಬೇರ್ ಬಿಡುಗಡೆ

Jan 5, 2025 - 09:21
 0
ಸಂಕ್ರಾಂತಿ ಹಬ್ಬಕ್ಕೆ  ಹಾರರ್ ಥ್ರಿಲ್ಲರ್ ಟೆಡ್ಡಿಬೇರ್ ಬಿಡುಗಡೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಹೌದು ಟೆಡ್ಡಿ ಬೇರ್ ಪ್ರತಿಯೊಬ್ಬರಿಗೂ ಇಷ್ಟ ಆಗುವ  ಗೊಂಬೆ .ಈ ಗೊಂಬೆಯನ್ನೇ ಕ್ಯಾರೆಕ್ಟರ್ ಇಟ್ಕೊಂಡು ಒಂದು ಸಿನಿಮಾ ರೆಡಿಯಾಗಿದೆ ಅದುವೇ ಟೆಡ್ಡಿ ಬೇರ್. ಇದೊಂದು ವಿಭಿನ್ನ ಕಥಾಂದರ ಚಿತ್ರವಾಗಿದ್ದು, ತುಂಬಾ ಭಯ ಉಂಟು ಮಾಡುವ ಹಾರರ್ ಥ್ರಿಲ್ಲರ್  ಎಲಿಮೆಂಟ್ಸ್ ಗಳಿದವೆ.

ಈ ವರ್ಷದ ಮೊದಲ ಹಾರರ್ ಸಿನಿಮಾ ಅಂತ ಕೂಡ ಹೇಳಬಹುದು. ಈಗಾಗಲೇ ಈ  ಚಿತ್ರ ಬಾರಿ ಸದ್ದು ಮಾಡುತ್ತಿದ್ದು, ಸೆನ್ಸರ್ ಮಂಡಳಿಯಿಂದ  U/A ಸರ್ಟಿಫಿಕೇಟ್ ಕೂಡ ಪಡೆದಿದೆ. ಸಾಮಾನ್ಯವಾಗಿ ವಿಜ್ಞಾನಿಗಳು ದೇವರು ಮತ್ತು ದೆವ್ವಗಳನ್ನು ನಂಬಲ್ಲ ಎಂಬುದೇ ಈ ಚಿತ್ರದ  ಒನ್ ಲೈನ್ ಸ್ಟೋರಿಯಾಗಿದೆ.

ಈ ಚಿತ್ರಕ್ಕೆ  ಸುಪ್ರೀಂ ಸ್ಟಾರ್ ಭಾರ್ಗವ ನಾಯಕ ನಟನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಶೈಲಜಾ ಸಿಂಹ ಅಭಿನಯಿಸಿದ್ದಾರೆ. ಇವರ ಜೊತೆಗೆ ಸ್ಪರ್ಶ ರೇಖಾ , ದಿಶಾ ಪೂವಯ್ಯ , ಚೈತ್ರ, ಅರವಿಂದ್,  ದೀನಾ ಪೂಜಾರಿ, ಬೇಬಿ ಅಕ್ಷರ ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ, ಈ ಚಿತ್ರವನ್ನು ಲೋಕೇಶ್ ಬಿ ನಿರ್ದೇಶನ ಮಾಡಿದ್ದು, ಜ್ಯೋತಿ ಟಾರ್ಕೇಶ್, ನವೀನ್ ರಿಗಟ್ಟಿ, ಬರತ್ ಕುಮಾರ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಹಾಗೂ ವಿವೇಕ್ ಜುಗ್ಲಿ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು ಸಂತೋಷ್  ಯಾದವ್ ಸಂಕಲನ ಮಾಡಿದ್ದಾರೆ. ಚಿತ್ರ ಈಗಾಗಲೇ  ಪ್ರಚಾರದಲ್ಲಿ ತೊಡಗಿದ್ದು, ಇದೇ ಜನವರಿ  10ರಂದು ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.