ವಿವಿಧ ಸಮಾಜದವರಿಂದ ಶಾಸಕ ಅಶೋಕ ಮನಗೂಳಿಗೆ ಸನ್ಮಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ತಾಂಬಾ : ನನ್ನ ಆಡಳಿತಾವಧಿಯಲ್ಲಿ ಬಡವರಿಗೆ ಎಂದು ಮೋಸ ಮಾಡಲಿಕ್ಕೆ ಬಿಡುವದಿಲ್ಲ ಎಂದು ಸಿಂದಗಿ ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.
ಅವರು ನೂತನವಾಗಿ ಆಯ್ಕೆಯಾಗಿರುವ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಥಾಯಿ ಸಮಿತಿ ಸದಸ್ಯ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರಿಗೆ ತಾಂಬಾ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ನಗರದ ನಾಗರಿಕರಿಂದ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮದಲ್ಲಿನ ಮೂಲಭೂತ ಸಮಸ್ಯೆಗಳಿಗೆ ಪ್ರಥಮಾದ್ಯತೆ ನೀಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿ ವಿಷಯದಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು.ಗ್ರಾಮೀಣ ಭಾಗದ ಸಮಸ್ಯೆಗಳನ್ನು ನೇರವಾಗಿಭೇಟಿಯಾಗಿ ನನ್ನ ಗಮನಕ್ಕೆ ತರಬೇಕು. ಯಾವುದೇ ರೀತಿಯ ಮುಜುಗರ ಬೇಡ. ೫ ವರ್ಷಗಳ ಕಾಲ ನಿಮ್ಮ ಸೇವಕನಾಗಿ ಕಾರ್ಯನಿರ್ವಹಿಸುತ್ತೇನೆ. ಅಭಿವೃದ್ಧಿಗೆ ಪ್ರತಿಯೊಬ್ಬರು ಸಲಹೆ, ಸಹಕಾರ, ಮಾರ್ಗದರ್ಶನ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಮಾಳಿ ಸಮಾಜ ವತಿಯಿಂದ, ವಿಶ್ವಕರ್ಮ ಸಮಾಜ ವತಿಯಿಂದ, ಪಂಚಮಸಾಲಿ ಸಮಾಜ ವತಿಯಿಂದ, ಕಾಂಗ್ರಸ್ ಪಕ್ಷದ ವತಿಯಿಂದ ಅಪ್ಪಣ್ಣ ಕಲ್ಲೂರ, ದವಲಮಲಿಕ ದೇವಸ್ಥಾನದ ವತಿಯಿಂದ,ಹಳೆವಾಡೆ ರಸ್ತೆಯ ರೈತರಿಂದ, ಕೆಂಗನಾಳ ಗ್ರಾಮದ ರಾಜುಗೌಡ ಪಾಟೀಲ ಅವರಿಂದ, ವಾಡೆ ಗ್ರಾಮದ ಮಲ್ಲಗೌಡ ಬಿರಾದರ ಅವರಿಂದ, ಮಲ್ಲಿಕಾರ್ಜುನ ದೇವಸ್ಥಾನದ ವತಿಯಿಂದ, ಅಂಜುಮನ್ ಕಮಿಟಿ ವತಿಯಿಂದ, ಹಾಲುಮತ ಸಮಾಜದ ವತಿಯಿಂದ, ಆದರ್ಶ ನಗರ, ಕಿತ್ತೂರ ರಾಣಿಚನ್ನಮ್ಮ ನಗರದ ನಾಗರಿಕರಿಂದ ಶಾಸಕರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ರಜಾಕಸಾಬ ಚಿಕ್ಕಗಸಿ, ರಾಚ್ಚಪ್ಪ ಗಳೇದ, ಅಪ್ಪಣ್ಣಕ ಲ್ಲೂರ, ಪರಸು ಬಿಸನಾಳ, ಅಮರ್ ವಸ್ತçದ, ಜಕ್ಕಪ್ಪತ .ಹತ್ತಳ್ಳಿ, ಸಿದ್ದನಗೌಡ ಪಾಟೀಲ ಕೆ.ಎನ್. ಪಾಟೀಲ, ರಾಜುಗೌಡ ಪಾಟೀಲ, ಮಹ್ಮದ ಧಡೆದ, ಯೊಗಪ್ಪ ಹೋರಪೇಟಿ, ಮುನ್ನಾ ನಾಗಠಾಣ, ಬಸವರಾಜ ಅವಟಿ, ವಿಜಯ ಪತ್ತರ, ವಿಜಯಕುಮಾರ ದೊಡ್ಡಮನಿ, ಸಿದ್ದು ಹತ್ತಳಿ, ಮಹಾಂತಯ್ಯ ಹಿರೇಮಠ, ಸಿದ್ದು ಅಳ್ಳಗಿ, ಆಶೋಕ ಪೂಜಾರಿ, ರೇವಣ್ಣಸಿದ್ದ ಕವೇಕರ, ಶಿವಶಂಕರ ಸೋಮನಿಂಗ, ಜೈಭೀಮ ರೂಗಿ, ನಾಗಪ್ಪ ಹಂಚನಾಳ,ದಯಾನಂದ ನಿಂಬಾಳ, ಗೋಪಾಲ ಅವರಾದಿ, ಶಾಂತಪ್ಪ ಹಚನಾಳ, ಗುರಪ್ಪ ಜಂಬಗಿ, ಉಪಸ್ಥಿತರಿದ್ದರು.