ತಾಳಿಕೋಟಿ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಮನವಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಮುದ್ದೇಬಿಹಾಳ : ಪಕ್ಕದ ತಾಳಿಕೋಟೆಯಲ್ಲಿ ಅ.೧ ರಂದು ನಡೆಯಲಿರುಬ ಪ್ರಥಮ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸರ್ವರೂ ಕೈಜೋಡಿಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ ವಿನಂತಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ಕರೆದಿದ್ದ ಕಸಾಪ ತಾಲ್ಲೂಕು ಘಟಕದ ಸಭೆಯಲ್ಲಿ ಅವರು ಮಾತನಾಡಿದರು.ಸಮ್ಮೇಳನ ಎಂದಾಗ ಕೆಲವೊಂದು ಲೋಪದೋಷಗಳು ಸಹಜವೆಂದು ಭಾವಿಸಿ ಎಲ್ಲರೂ ಕನ್ನಡದ ತೇರನ್ನು ಎಳೆಯೋಣ ಎಂದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಸಾಹಿತ್ಯದ ಮನಸ್ಸುಗಳು ಒದುಗೂಡಿ ಶ್ರಮಿಸೋಣ.ಒತ್ತಡದ ಮಧ್ಯೆ ಆಮಂತ್ರಣ ತಲುಪಿಸಲು ತುಸು ತಡವಾಗಿದೆ.ಜಿಲ್ಲಾ ಕಸಾಪ, ತಾಳಿಕೋಟಿ ಘಟಕದ ತಾಲ್ಲೂಕು ಅಧ್ಯಕ್ಷರು ತಮಗೆ ವಿನಂತಿಸಿದ್ದು ಸರ್ವರೂ ಸಮ್ಮೇಳನದಲ್ಲಿ ಭಾಗಿಯಾಗುವಂತೆ ವಿನಂತಿಸಿದರಲ್ಲದೇ ಮುದ್ದೇಬಿಹಾಳ ತಾಲ್ಲೂಕಿನಿಂದ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ವಿನಂತಿಸಿ ಹೆಚ್ಚಿನ ಬಸ್ ಸೌಲಭ್ಯ ಅಂದು ಕಲ್ಪಿಸಲು ಮನವಿ ಮಾಡುವುದಾಗಿ ಹೇಳಿದರು.
ಯುವ ಸಾಹಿತಿ ಪ್ರಭುಗೌಡ ರಾರೆಡ್ಡಿ ಮಾತನಾಡಿ, ತಾಳಿಕೋಟಿ ತಾಲ್ಲೂಕಿನ ಶಿಕ್ಷಕರಿಗೆ ಮಾತ್ರ ಓಓಡಿ ಸೌಲಭ್ಯ ಕೊಡುವುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು ಅದನ್ನು ಮುದ್ದೇಬಿಹಾಳ ತಾಲ್ಲೂಕಿನಿಂದ ಪಾಲ್ಗೊಳ್ಳುವ ಶಿಕ್ಷಕರಿಗೂ ಒದಗಿಸಬೇಕು. ತಾಲ್ಲೂಕುಗಳು ವಿಭಜಿತವಾದರೂ ಶಿಕ್ಷಣಾಧಿಕಾರಿಗಳ ಕಚೇರಿ ಮುದ್ದೇಬಿಹಾಳದಲ್ಲೇ ಇದೆ ಎಂದರು.
ಸಾಹಿತಿ ಅಶೋಕ ಮಣಿ, ಅಬ್ದುಲರಹೇಮಾನ ಬಿದರಕುಂದಿ, ಪ್ರೋ.ಪಿ.ಎಚ್.ಉಪ್ಪಲದಿನ್ನಿ, ಪತ್ರಕರ್ತರಾದ ಡಿ.ಬಿ.ವಡವಡಗಿ, ಶಂಕರ ಹೆಬ್ಬಾಳ, ಪುಂಡಲೀಕ ಮುರಾಳ, ನಾರಾಯಣ ಮಾತಾಚಾರಿ, ಪರಶುರಾಮ ಕೊಣ್ಣೂರ ಮತ್ತಿತರರು ಮಾತನಾಡಿ, ತಾಳಿಕೋಟಿ ತಾಲ್ಲೂಕು ಘಟಕದವರು ಸೌಜನ್ಯಕ್ಕಾದರೂ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಕ್ಕೆ ಬನ್ನಿ ಎಂದು ಸಂಪ್ರದಾಯದಂತೆ ಮುದ್ದೇಬಿಹಾಳ ತಾಲ್ಲೂಕು ಸಾಹಿತಿಗಳಿಗೆ ಆಮಂತ್ರಣ ನೀಡದೇ ಇರುವುದು ಸರಿಯಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಾಹಿತ್ಯಾಸಕ್ತರಾದ ಎಸ್.ಎಸ್.ಪಾಟೀಲ್, ಶಿವಕುಮಾರ ಹಡಪದ, ಬಿ.ವಿ.ಕೋರಿ, ವಾಯ್.ಎಚ್.ವಿಜಯಕರ್ ಮಾತನಾಡಿದರು. ಹುಸೇನ್ ಮುಲ್ಲಾ ನಿರೂಪಿಸಿದರು. ಹಿರಿಯ ಸಾಹಿತಿ ಚಂದ್ರಶೇಖರ ಇಟಗಿ, ಎಸ್.ಎಸ್.ಹುನಗುಂದ,ಪರಶುರಾಮ ಚೌಡಕೇರ, ಗಂಗಾಧರ ಪವಾಡಶೆಟ್ಟಿ, ರಾಜುಗೌಡ ತುಂಬಗಿ, ಅಮರೇಶ ಗೂಳಿ, ಹುಸೇನ್ ಮುಲ್ಲಾ, ಸದು ಮಠ, ಸೋಮಶೇಖರ ಮೇಟಿ ಮೊದಲಾದವರು ಇದ್ದರು.