ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಜಿ.ಪಿ. ಘೋರ್ಪಡೆ
ತಾಳಿಕೋಟೆ : ಅಕ್ಟೋಬರ ೧ ರಂದು ಪಟ್ಟಣದಲ್ಲಿ ಜರುಗಲಿರುವ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಅಕ್ಷರ ಜಾತ್ರೆಯ ಯಶಸ್ವಿಗೆ ಎಲ್ಲ ಪೂರ್ವ ಸಿದ್ದತೆಗಳು ಪೂರ್ಣಗೊಂಡಿವೆ. ಅಲ್ಲದೇ ಈ ಅಕ್ಷರ ಜಾತ್ರೆಗೆ ಅಕ್ಕರೆಯ ಸ್ವಾಗತಕೋರಲು ಶ್ರೀ ಸಂಗಮೇಶ್ವರ ಸಭಾಭವನವು ಕೂಡ ಸಂಪೂರ್ಣ ಸಜ್ಜುಗೊಂಡಿದೆ.
ಕನ್ನಡಾಂಭೆಯ ಹೊತ್ತು ಮೆರೆಸುವದರೊಂದಿಗೆ ತೊದಲು ನುಡಿಯಲ್ಲಿ ಆಡುವ ಭಾಷೆ ಕನ್ನಡಕ್ಕೆ ಮೇರಗು ನೀಡುವಂತಹ ಕಾರ್ಯಕ್ಕೆ ಎಲ್ಲ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಜ್ಜಾಗುವದರ ಜೊತೆಗೆ ಪಟ್ಟಣದ ತುಂಬೆಲ್ಲಾ ಹಬ್ಬದ ಸಡಗರ ಹೆಚ್ಚಿಸುವಂತಹ ಕಾರ್ಯದಲ್ಲಿ ತಲ್ಲೀನರಾಗಿದ್ದು ಇಡೀ ತಾಳಿಕೋಟೆ ಪಟ್ಟಣವು ಮದುವನಗಿತ್ತಿಯಂತೆ ಶ್ರೀಂಗಾರಗೊAಡಿದೆ.
----
ವಿವಿಧ ಕಲಾ ತಂಡಗಳು ಭಾಗಿ
ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡಾಂಭೆ ಭುವನೇಶ್ವರಿ ದೇವಿಯ ಭಾವಚಿತ್ರದ ಭವ್ಯಮರವಣೆಗೆಗೆ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ಎರಡು ಕಲಾ ತಂಡಗಳು ಆಗಮಿಸಲಿದ್ದು ಇನ್ನೂಳಿದಂತೆ ಕಸಾಪದಿಂದ ಎರಡು ಕರಡಿ ಮಜಲ, ೫ ಹಲಗಿ ಮೇಳ, ೧೦ ಡೊಳ್ಳ ಮೇಳ, ಎರಡು ಬ್ಯಾಂಡಸೇಟ್, ದುರ್ಗಮುರ್ಗಿ ಕುಣಿತ, ಲೇಜಿಮ್ ಆಟ, ಕೋಲಾಟ, ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ ಮತ್ತು ಎಸ್.ಕೆ.ಶಿಕ್ಷಣ ಸಂಸ್ಥೆಯಡಿ ಎರಡು ಜಾನಪದ ನೃತ್ಯ, ಮಾಳನೂರ ಏಶೇಗಾರ ಕುಣಿತ ಒಳಗೊಂಡು ನಾನಾ ರೀತಿಯ ಕಲಾತಂಡಗಳು ಪಟ್ಟಣಕ್ಕೆ ಈಗಾಗಲೇ ಆಗಮಿಸಿದ್ದು ಮಂಗಳವಾರ ಪಟ್ಟಣದಲ್ಲಿ ಕನ್ನಡದ ಕಲರವದ ಗಾಳಿ ಬೀಸಲಿಕ್ಕೆ ಸಿದ್ದತೆಗಳು ನಡೆದಿವೆ ಅಲ್ಲದೇ ಸಮ್ಮೇಳನದ ಸರ್ವಾಧ್ಯಕ್ಷರ ಮೇರವಣೆಗೆಯ ಸಾರೋಟಕೂಡಾ ಆಗಮಿಸಿದ್ದು ಒಟ್ಟಾರೆ ಈ ಸಮ್ಮೇಳನವು ತಾಳಿಕೋಟೆ ಪಟ್ಟಣದ ಮೊದಲಿನ ಐತಿಹಾಸಿಕ ಘತ ವೈಭವ ಮರುಕಳಿಸುವ ರೀತಿಯ ಜೊತೆಗೆ ಮೇರಗನ್ನು ಹೆಚ್ಚಿಸಿ ತಾಳಿಕೋಟೆ ತಾಲೂಕಿನ ಅಭಿವೃದ್ದಿಯ ಸಂಖ್ಯೇತದ ಮುನ್ನುಡಿ ಬರೆಯಲು ಸಮ್ಮೇಳನದ ತಯಾರಿಯೂ ಸಜ್ಜಾಗಿದೆ.
----
೧೦ ಸಾವಿರ ಜನ ಸೇರುವ ನಿರಿಕ್ಷೆ
ತಾಳಿಕೋಟೆ ತಾಲೂಕಾ ಕೇಂದ್ರವಾಗಿ ರಚನೆಯಾದ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರಥಮವಾಗಿ ಜರುಗುತ್ತಿರುವದರಿಂದ ಇಡೀ ತಾಲೂಕಿನಾದ್ಯಂತ ಎಲ್ಲ ಸಾಹಿತ್ಯಾಸಕ್ತರನ್ನು, ಕನ್ನಡಾಭಿಮಾನಿಗಳನ್ನು ಅಹ್ವಾನಿಸಲಾಗಿದೆ ಈ ಅಕ್ಷರ ಜಾತ್ರೆಗೆ ಕನಿಷ್ಠ ೧೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಆಗಮಿಸುವ ನಿರಿಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಆಗಮಿಸುವ ಎಲ್ಲ ಜನರಿಗೆ ಪಕ್ವಾನ ಭೋಜನಕ್ಕೆ ಯಾವುದೇ ರೀತಿಯ ತೊಂದರೆಯಾಗದAತೆ ಎರಡು ಬೃಹತ್ ಹಾಲ್‌ನಲ್ಲಿ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು ಈಗಾಗಲೇ ಜನರಿಗಾಗಿ ಉತ್ತರ ಕರ್ನಾಟಕದ ಅತೀ ಮುಖ್ಯವಾದ ಮಾದಲಿ, ಬದನಿಕಾಯಿ ಪಲ್ಲೆ, ಅನ್ನ ಸಾಂಬಾರ, ಉಪ್ಪಿನಕಾಯಿ, ಜೊತೆಗೆ ಊಟಕ್ಕೆ ಹಿತಕರವಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
----
೧೦ ವಿವಿಧ ಮಳಿಗೆಗಳ ಸ್ಥಾಪನೆ
ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಶ್ರೀ ಸಂಗಮೇಶ್ವರ ಸಭಾ ಭವನದ ಪಕ್ಕದ ಎಡ ಭಲದಲ್ಲಿ ಪುಸ್ತಕ ಮಳಿಗೆ, ಚಿತ್ರಕಲಾ ಮಳಿಗೆ, ಗ್ರಾಮುಧ್ಯೋಗ ಸಂಬAದಿತ ಮಳಿಗೆ, ರೈತರಿಗೆ ಮಾಹಿತಿ ನೀಡುವ ಮಳಿಗೆ, ಒಳಗೊಂಡAತೆ ಕನ್ನಡ ಸಾಹಿತ್ಯಾಸಕ್ತರಿಗೆ ಕನ್ನಡಾಭಿಮಾನಿಗಳಿಗೆ ಅತ್ಯವಶ್ಯಕವಾಗಿರುವ ಎಲ್ಲ ರೀತಿಯ ವಸ್ತುಗಳನ್ನು ರೀಯಾಯಿತಿ ದರದಲ್ಲಿ ಒದಗಿಸಲು ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದ್ದು ಈಗಾಗಲೇ ಮಳಿಗೆಗಳಲ್ಲಿ ಪುಸ್ತಕ ಒಳಗೊಂಡು ಮಾರಾಟಗಾರರು ಮಳಿಗೆಗಳನ್ನು ಬುಕ್ ಮಾಡಿಕೊಂಡು ತಮ್ಮ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ
----
ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಅಗತ್ಯಕ್ಕಿಂತ ಹೆಚ್ಚಿಗೆ ತಾಲೂಕಿನ ಎಲ್ಲ ಕನ್ನಡಾಭಿಮಾನಿಗಳು ಕೈಜೋಡಿಸಿ ಟೊಂಕಕಟ್ಟಿ ನಿಂತು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಸಮ್ಮೇಳನದ ಪೂರ್ವತಯಾರಿ ಎಲ್ಲವೂ ಮುಗಿದಿದ್ದು ಜಿಲ್ಲಾ ಸಮ್ಮೇಳನದ ಮಾದರಿಯಲ್ಲಿ ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ತಾಲೂಕಿನ ಎಲ್ಲ ಸಾಹಿತಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡು ಶ್ರೀ ಭುವನೇಶ್ವರಿ ದೇವಿಯ ತೇರನ್ನು ಎಲ್ಲರೂ ಜೊತೆಗೂಡಿ ಎಳೆಯೋಣವೆಂದು ಪ್ರಾರ್ಥನೆಯನ್ನು ಮಾಡುತ್ತೇನೆ.
ರೇವಣಸಿದ್ದಪ್ಪ ಕೊಪ್ಪದ
ಕಸಾಪ ತಾಲೂಕಾ ಅಧ್ಯಕ್ಷರು ತಾಳಿಕೋಟೆ