ನವರಾತ್ರೋತ್ಸವ ; ೪ ಸ್ಥಳಗಳಲ್ಲಿ ಶ್ರೀ ದೇವಿಮೂರ್ತಿ ಪ್ರತಿಷ್ಠಾಪನೆ

Oct 4, 2024 - 12:54
 0
ನವರಾತ್ರೋತ್ಸವ ; ೪ ಸ್ಥಳಗಳಲ್ಲಿ ಶ್ರೀ ದೇವಿಮೂರ್ತಿ ಪ್ರತಿಷ್ಠಾಪನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ತಾಳಿಕೋಟೆ :  ಪ್ರತಿ ವರ್ಷದಂತೆ ಈ ಸಲವೂ ನವರಾತ್ರೋತ್ಸವ ಅಂಗವಾಗಿ ಪಟ್ಟಣದ ೪ ಸ್ಥಳಗಳಲ್ಲಿ ಶ್ರೀ ನಾಡದೇವಿ ಮೂರ್ತಿಗಳನ್ನು ಗುರುವಾರರಂದು ಭಕ್ತಿ ಭಾವದೊಂದಿಗೆ ಪ್ರತಿಷ್ಠಾಪಿಸಲಾಯಿತು.

ಪಟ್ಟಣದ ರಜಪೂತ ಸಮಾಜ ಬಾಂದವರ ವತಿಯಿಂದ ರಜಪೂತ ಬಡಾವಣೆಯಲ್ಲಿ, ನವರಾತ್ರೋತ್ಸವ ಸಮಿತಿಯವರ ವತಿಯಿಂದ ಕಾಮನಕಟ್ಟಿ ಬಡಾವಣೆಯಲ್ಲಿ, ದಸರಾ ಉತ್ಸವ ಕಮಿಟಿಯವರ ವತಿಯಿಂದ ಶ್ರೀ ವಿಠ್ಠಲ ಮಂದಿರದಲ್ಲಿ, ಹಾಗೂ ಶ್ರೀ ದೇವಿ ಮಾತೃಮಂಡಳಿ ಮತ್ತು ಹಿಂದೂ ಮಹಾಗಣಪತಿ ಮಹಾ ಮಂಡಳಿಯವರ ನೇತೃತ್ವದಲ್ಲಿ ತಿಲಕ ರಸ್ತೆ ಬಡಾವಣೆಯಲ್ಲಿ ಸಾಯಂಕಾಲ ಪ್ರತಿಷ್ಠಾಪಿಸಲಾಯಿತು.

ನಂತರ ಅರ್ಚಕರುಗಳಿಂದ ಶ್ರೀ ದೇವಿಗೆ ಮಹಾ ಪೂಜೆ, ಘಟ ಸ್ಥಾಪನೆ ಕಾರ್ಯಕ್ರಮಗಳು ಜರುಗಿದವು.

೯ ದಿನಗಳ ಕಾಲ ನಡೆಯುವ ಈ ದೇವಿಯ ನವರಾತ್ರೋತ್ಸವ ಅಂಗವಾಗಿ ಶ್ರೀ ದೇವಿಯ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗುವಲ್ಲದೇ ಮಹಿಳೆಯರಿಗಾಗಿ ಮನರಂಜನೆ ಅಲ್ಲದೇ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದಾ ಕಾರ್ಯಕ್ರಮಗಳು ಜರುಗಲಿವೆ.

ಈ ಉತ್ಸವ ಅಂಗವಾಗಿ ಪಟ್ಟಣದ ಕ್ಷತ್ರೀಯ ಮರಾಠಾ ಸಮಾಜದ ಶ್ರೀ ಶಿವಭವಾನಿ ಮಂದಿರದಲ್ಲಿ ಹಾಗೂ ಶ್ರೀ ಖಾಸ್ಗತೇಶ್ವರ ನಗರದ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮಹಾ ಪುರಾಣ ಕಾರ್ಯಕ್ರಮವು ಜರುಗಲಿದೆ ಅಲ್ಲದೇ ರಜಪೂತ ಸಮಾಜದ ಶ್ರೀ ಅಂಬಾಭವಾನಿ ದೇವಸ್ಥಾನ, ಭಾವಸಾರ ಕ್ಷತ್ರೀಯ ಸಮಾಜದ ಶ್ರೀ ಅಂಬಾಭವಾನಿ ಮಂದಿರ, ಗೋಂದಳಿ ಸಮಾಜದ ಶ್ರೀ ಅಂಬಾಭವಾನಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.