ಮಾದಕ ವಸ್ತುಗಳಿಂದ ದೂರವಿರಿ : ವಿರೇಶ ಹಳಿಮನಿ

Jan 31, 2025 - 15:23
 0
ಮಾದಕ ವಸ್ತುಗಳಿಂದ ದೂರವಿರಿ : ವಿರೇಶ ಹಳಿಮನಿ

ರಂಗಂಪೇಟೆ : ವಿಧ್ಯಾರ್ಥಿಗಳು ಮತ್ತು ಯುವ ಜನರು ಮಾಧಕ ವ್ಯಸಗಳಿಂದ ದೂರವಿರಬೇಕು ಎಂದು ರಂಗಂಪೇಟೆ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ವಿರೇಶ ಹಳಿಮನಿ ಹೇಳಿದರು.

ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನೆಹರು ಯುವಕೇಂದ್ರ ಕಲಬುರಗಿ, ಸಗರನಾಡು ಯುವಕ ಸಂಘ, ರಾಯಚೂರು ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಆಯೋಜಿಸಿದ್ದ ಮಾದಕ ವ್ಯಸನದ ಬಗ್ಗೆ ಅರಿವು ಮತ್ತು ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಇಂದಿನ ಯುವಜನರು ಮತ್ತು ವಿದ್ಯಾರ್ಥಿಗಳು ಮಾದಕ ವಸ್ತುಗಳಾದ ಗುಟುಕಾ, ತಂಬಾಕು, ಮದ್ಯಪಾನ, ಗಾಂಜಾ, ಅಫಿಮ್, ಡ್ರಗ್ಸ್ ಇವುಗಳಿಂದ ದೂರವಿರಬೇಕು ಇವುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬಿರಲಿದ್ದು, ಯುವಜನರು ಜಾಗೃತ ವಹಿಸಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಉದ್ಘಾಟಿಸಿದರು, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬಲಭೀಮ ಪಾಟೀಲ, ರುದ್ರಪ್ಪ ಕೆಂಭಾವಿ ವಿಶೇಷ ಉಪನ್ಯಾಸ ನೀಡಿದರು, ರೋಹಿಣಿ ಸುರಪುರ, ಮೇಘಾ ದಾಯಿಪುಲ್ಲೆ ಅತಿಥಿಗಳಾಗಿ ವೇದಿಕೆ ಮೇಲಿದ್ದರು, ಕಾರ್ಯಕ್ರಮವನ್ನು ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಬಸಣ್ಣಗೌಡ ಸೂಗುರು ಸ್ವಾಗತಿಸಿದರು.      

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.