ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲಗೆ ಬಂಜಾರ ಸಮುದಾಯದ ಗುರುಗಳಿಂದ ಸನ್ಮಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ನಗರದ ಬಂಜಾರಾ ಕ್ರಾಸ್ ಬಳಿ ಇರುವ ಕೂಡು ರಸ್ತೆಗೆ ಸಂತ ಶ್ರೀ ಸೇವಾಲಾಲ ಮಹಾರಾಜರ ವೃತ್ತ ಎಂದು ನಾಮಕರಣ ಮಾಡಲು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರನ್ನು ಬಂಜಾರಾ ಸಮುದಾಯದ ಧರ್ಮ ಗುರುಗಳು ಮತ್ತು ಮುಖಂಡರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಶನಿವಾರ ಶಾಸಕರ ಕಚೇರಿಗೆ ಆಗಮಿಸಿದ ಬಂಜಾರಾ ಧರ್ಮ ಗುರುಗಳು ಮತ್ತು ಮುಖಂಡರು ನಮ್ಮ ಬಹುದಿನಗಳ ಬೇಡಿಕೆಯಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಸಚಿವರಾದ ಎಂ. ಬಿ. ಪಾಟೀಲ ಮತ್ತು ಶಾಸಕರಾದ ಸುನೀಲಗೌಡ ಪಾಟೀಲ ಅವರು ಇತ್ತೀಚಿಗೆ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ನಗರದ ಸೋಲಾಪುರ ರಸ್ತೆಯಲ್ಲಿರುವ ಶ್ರೀ ಡಿ. ಎಲ್. ಚವ್ಹಾಣ ಅವರ ವಾಣಿಜ್ಯ ಮಳಿಗೆ ಮತ್ತು ರಿಲಾಯನ್ಸ್ ಪೆಟ್ರೋಲ್ ಪಂಪ ಹತ್ತಿರ ಇರುವ ಕೂಡು ರಸ್ತೆಗೆ ಸಂತ ಶ್ರೀ ಸೇವಾಲಾಲ ಮಹಾರಾಜರ ವೃತ್ತ ಎಂದು ನಾಮಕರಣ ಮಾಡಲು ಠರಾವು ಪಾಸ್ ಮಾಡಲು ಕ್ರಮ ಕೈಗೊಂಡಿದ್ದಾರೆ. ಇದರಿಂದಾಗಿ ನಮ್ಮ ಸಮುದಾಯಕ್ಕೆ ಅತೀವ ಸಂತೋಷವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಮತ್ತು ಶಾಸಕ ಸುನೀಲಗೌಡ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನೀಲಗೌಡ ಪಾಟೀಲ, ಸಂತ ಶ್ರೀ ಸೇವಾಲಾಲ ಮಹಾರಾಜರ ವೃತ್ತ ಅಭಿವೃದ್ಧಿ ಪಡಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಆದಷ್ಟು ಶೀಘ್ರದಲ್ಲಿ ವೃತ್ತವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಸೂರ ಮಠದ ಶ್ರೀ ಸಿದ್ದಲಿಂಗ ಮಹಾರಾಜರು, ಸೋಮದೇವರಹಟ್ಟಿಯ ಶ್ರೀ ಜಗನು ಮಹಾರಾಜರು, ಕೆಸರಾಳ ತಾಂಡಾದ ಶ್ರೀ ಧನಸಿಂಗ್ ಮಹಾರಾಜರ, ತೊರವಿಯ ಶ್ರೀ ಮಹಾರಾಜರು, ಇಟ್ಟಂಗಿಹಾಳ ಎಲ್.ಟಿ- 04ರ ಭೀಮಸಿಂಗ್ ಮಹಾರಾಜರು, ಮುಖಂಡರಾದ ಚಂದ್ರಶೇಖರ ರಾಠೋಡ, ರಾಜು ಬೀಮಸಿಂಗ್ ನಾಯಕ, ಬಿಲ್ಲು ರಾಠೋಡ, ವಿಟ್ಟು ರಾಠೋಡ, ವಿಜಯ ಚವ್ಹಾಣ, ರವಿ ರಾಠೋಡ, ಚಂದು ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.