ಈರಣ್ಣ ಹೊಸಟ್ಟಿಗೆ ರಾಜ್ಯ ಮಟ್ಟದ ಅತ್ಯುತಮ ಪ್ರಶಸ್ತಿ

Oct 1, 2024 - 19:42
 0
ಈರಣ್ಣ ಹೊಸಟ್ಟಿಗೆ ರಾಜ್ಯ ಮಟ್ಟದ ಅತ್ಯುತಮ ಪ್ರಶಸ್ತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ : ಸೆ. ೨೮ ರಂದು ಬೆಂಗಳೂರಿನ ಪುಟ್ಟಣ್ಣ ಚಟ್ಟಿ ಪುರಭವದಲ್ಲಿ ಖ್ಯಾತ ಸಾಹಿತಿ ಹಾಗೂ ಸಮಾಜ ಸೇವಕ ನಾಗಲೇಖ ಅವರ ಜನಸಿರಿ ಫೌಂಡೇಷನ್(ರಿ) ವತಿಯಿಂದ ಪ್ರತಿವರ್ಷದಂತೆ ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಿಜಯಪುರ ಗ್ರಾಮೀಣ ವಲಯದ ಆಹೇರಿ ಎಲ್ ಟಿ ೧ ಶಾಲೆಯ ಶಿಕ್ಷಕ ಈರಣ್ಣ ಹೊಸಟ್ಟಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠಮಾಡುವುದರ ಜೊತೆಯಲ್ಲಿ ಕರೋಣ ಸಮಯದಲ್ಲಿ ಹಲವಾರು ವಿಡಿಯೋ ಪಾಠಗಳನ್ನು ಮಾಡಿ ಮಕ್ಕಳ ಕಲಿಕೆಯನ್ನು ಸುಗಮಗೊಳಿಸಿದರು ಹಾಗೂ ಜಾನಪದ ಸಾಹಿತ್ಯವನ್ನೂ ಜಾನಪದ ಸಂಸ್ಕೃತಿಯನ್ನು ಉಳಿಸಿಬೆಳಸಿಕೊಂಡು ಹೊಗುವಲ್ಲಿ ಮುಂಚೊಣಿಯಲ್ಲಿ ಕೆಲಸಮಾಡುವದರ ಜೊತೆಯಲ್ಲಿ ಶಿಕ್ಷಕರಿಗೆ ಅ& ಖ ವಿಷಯದಲ್ಲಿ ಆದ ಅನ್ಯಾಯದ ವಿರುದ್ಧ ಹೋರಾಡಿದರು. ಶಿಕ್ಷಣ ಸಂಘಟನೆ ಹೋರಾಟ ಮನೋಭಾವ ಹೊಂದಿರುವ ಈರಣ್ಣ ಹೊಸಟ್ಟಿ ಅವರಿಗೆ ಈ ವರ್ಷದ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ ದೊರೆತಿದೆ. 

ಇವರ ಜೊತೆಗೆ ಸಂಗಮೇಶ ಜಂಗಮಶಟ್ಟಿ ಹಾಗೂ ಪರಮೇಶ್ವರ ಗಧ್ಯಾಳ ಹಾಗೂ ಸಚಿನ ತಳವಾರ ಇವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ರವೀಂದ್ರ ಉಗಾರ, ಹುಸೇನ್ ಚಿತ್ತರಗಿ, ನಿಜು ಮೇಲಿನಕೆರೆ, ಮುತ್ತು ಪೂಜಾರಿ ಉದಯ ಕೋಟ್ಯಾಳ, ಶಿವನಗೌಡ ಪಾಟೀಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.