ಗಣಪತಿ ಚೌಕ್ ನಲ್ಲಿ ಅಳವಡಿಸಿದ್ದ ಗ್ಲಾಸ್ ಗೆ ಕಲ್ಲು ಎಸೆತ : ಆರೋಪಿ ಬಂಧನ -ಎಸ್ಪಿ ಸೋನಾವಣೆ

Oct 4, 2024 - 11:23
 0
ಗಣಪತಿ ಚೌಕ್ ನಲ್ಲಿ ಅಳವಡಿಸಿದ್ದ ಗ್ಲಾಸ್ ಗೆ ಕಲ್ಲು ಎಸೆತ : ಆರೋಪಿ ಬಂಧನ -ಎಸ್ಪಿ ಸೋನಾವಣೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 
ವಿಜಯಪುರ : ನಗರದ ಗಣಪತಿ ಚೌಕ್ ನಲ್ಲಿ ಅಳವಡಿಸಿದ್ದ ಗ್ಲಾಸ್ ಗಳಿಗೆ ಕಲ್ಲೆಸೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಗುರುವಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಅವರು ಗಣಪತಿ ಚೌಕ್'ದಲ್ಲಿ ಗಣಪತಿ ಮೂರ್ತಿಗೆ ಕೆಸರು,ಧೂಳು ತಗುಲುದಂತೆ ಗಾಜಿನ ರಕ್ಷಾ ಕವಚ ಅಳವಡಿಸಲಾಗಿತ್ತು. ಅದಕ್ಕೆ  ದುಷ್ಕರ್ಮಿಯೊಬ್ಬರು ಕಲ್ಲೆಸೆದಿದ್ದರು .ಪೊಲೀಸರು ತನಿಖೆ ನಡೆಸಿ ಆರೋಪಿ ವಿಜಯಪುರ ನಗರದ ಟಕ್ಕೆಯ ಸೊಹೆಲ್ ಜಮಾದಾರ ನಿಗೆ ಬಂಧಿಸಿದ್ದಾರೆ.
ಅರೋಪಿ ವಿರುದ್ಧ ಬಿಎನ್ ಎಸ್ ಕಾಯ್ದೆ ೧೯೨,೧೯೬(೨),೩(೨) ಪಿಡಿಪಿಪಿ ಆಕ್ಟ್ ಪ್ರಕಾರ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಉಮೇಶ ವಂದಾಲ ಎನ್ನುವವರು ನೀಡಿದ ದೂರಿನ ಮೇರೆಗೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 ಪ್ರಕರಣವನ್ನು ಭೇದಿಸಲು ಗಾಂಧಿ ಚೌಕ್ ಪಿಐ ಪ್ರದೀಪ ತಳಕೇರಿ, ಪಿಎಸ್‌ಐ ರಾಜು ಮಮದಾಪೂರ, ಹಾಗೂ ಸಿಬ್ಬಂದಿಯವರ ತಂಡವನ್ನು ರಚಿಸಲಾಗಿತ್ತು.
ಅಧಿಕಾರಿ ಹಾಗೂ ಸಿಬ್ಬಂದಿಯವರು ಮಿಂಚಿನ ಕಾರ್ಯಾಚರಣೆ ನಡೆಸಿ  ದುಷ್ಕೃತ್ಯವನ್ನು ಮಾಡಿದ್ದ ಆರೋಪಿ ಸೊಹೆಲ್  ಮುನ್ನಾ ಜಮಾದಾರನನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಬಹುಮಾನ ಘೋಷಿಸಿದ್ದಾರೆ.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.