ಸೈನಿಕರ ಸೇವೆ ಸ್ಮರಿಸೋಣ-ನಡಹಳ್ಳಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಮುದ್ದೇಬಿಹಾಳ : ದೇಶದ ಗಡಿಯಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಸೇವೆ ಸಲ್ಲಿಸುವ ಸೈನಿಕರನ್ನು ನಿತ್ಯವೂ ಸ್ಮರಿಸೋಣ ಎಂದು ಯುವ ಉದ್ಯಮಿ ಭರತಗೌಡ ಪಾಟೀಲ್ ನಡಹಳ್ಳಿ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಪ್ಯಾರಾಮಿಲಿಟರಿ ಮಾಜಿ ಸೈನಿಕರ ಕಲ್ಯಾಣ ಸಂಘದ ೯ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶಕ್ಕಾಗಿ ಜೀವ ಕೊಡುವ ಸೈನಿಕರ ಹೆಸರು ಅಜರಾಮರವಾಗಿದ್ದು ಅವರ ಹೆಸರು ಉಳಿಸುವ ಕಾರ್ಯ ಆಗಬೇಕು.ಮಾಜಿ ಸೈನಿಕರು ಸಮಾಜದಲ್ಲಿರುವ ಬಡವರಿಗೆ ಆರೋಗ್ಯ ಚಿಕಿತ್ಸೆ ಕೈಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ನಿವೃತ್ತ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ ಮಾತನಾಡಿದರು.
ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು.ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕಿ ಚಾಲನೆ ನೀಡಿದರು.ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಪ್ಯಾರಾಮಿಲಿಟರಿ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಸಳಿ, ಸಾಹೇಬಗೌಡ ಗೋನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಮುಖರಾದ ಕಾಶೀಮಪಟೇಲ್ ಮೂಕಿಹಾಳ, ಬಸವರಾಜ ನಂದಿಕೇಶ್ವರಮಠ, ಮಹಾಂತೇಶ ಬೂದಿಹಾಳಮಠ,ಸಂಘದ ತಾಲ್ಲೂಕು ಅಧ್ಯಕ್ಷ ಜಬ್ಬಾರ ಪಲ್ಟನ್,ಉಪಾಧ್ಯಕ್ಷ ರೇವಣೆಪ್ಪ ಹರಿಜನ, ಕಾರ್ಯದರ್ಶಿ ಸೋಮಶೇಖರ ಚಿರಲದಿನ್ನಿ, ಬಾಬು ಮುದ್ದೇಬಿಹಾಳ,ಸದಸ್ಯರು ಉಪಸ್ಥಿತರರಿದ್ದರು.ಸಂಗಮೇಶ ಶಿವಣಗಿ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಾಗೀಶ ಹಿರೇಮಠ ಹಾಗೂ ಸಿದ್ಧನಗೌಡ ಕಾಶಿನಕುಂಟಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ ಆರೋಗ್ಯ ತಪಾಸಣಾ ಶಿಬಿರ: ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧರ ಪತ್ನಿಯರಾದ ಶಶಿಕಲಾ ಹಿರೇಮಠ, ರೇಖಾ ಕೊಂಡಗೂಳಿ, ಮಲ್ಲಮ್ಮ ಬಾಡಗಿ, ಜ್ಯೋತಿ ಡೊಂಗರಗಾವಿ,ಬೇಬಿ ಉಳ್ಳಾಗಡ್ಡಿ, ಗ್ಯಾನಮ್ಮ ಬೀಸಲದಿನ್ನಿ, ಎಂ.ಸಿ.ಪಾಟೀಲ್,ಪುಷ್ಪಾ ಬಡಿಗೇರ, ಸವಿತಾ ಒಡೆಯರ್,ಲಾಡಸಾ ಕಂಬಾರ, ಲಕ್ಷ್ಮೀಬಾಯಿ ವಿಭೂತಿ, ಅಕ್ಕಮ್ಮ ಗೌಡರ, ವನಮಾಲಾ ಮುದ್ದೇಬಿಹಾಳ, ಕಮಲಾ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.ವಿಜಯಪುರದ ಸಿದ್ಧಸಿರಿ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಯಿಂದ ವಿವಿಧ ಕಾಯಿಲೆಗಳಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಸಿ ಉಚಿತ ಔಷಧಿ ವಿತರಿಸಲಾಯಿತು.