ಅನಿಷ್ಟ ಪದ್ಧತಿ ನಿವಾರಣೆಗೆ ಶ್ರಮಿಸಿದ್ದ ಮಹಾಯೋಗಿ ವೇಮನ

Jan 19, 2025 - 19:58
 0
ಅನಿಷ್ಟ ಪದ್ಧತಿ ನಿವಾರಣೆಗೆ ಶ್ರಮಿಸಿದ್ದ ಮಹಾಯೋಗಿ ವೇಮನ

ಸಿಂದಗಿ: ವೇಮನ ೧೫ನೆಯ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರು; ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು ಎಂದು ನಿವೃತ್ತ ಆರ್.ಎಸ್.ಬಿರಾದಾರ ಹೇಳಿದರು.

  ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಹಮ್ಮಿಕೊಂಡ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಸರ್ವಜ್ಞ, ತಮಿಳುನಾಡಿನಲ್ಲಿ ತಿರುವಳ್ಳುವರ್ ಅವರಂತೆ ಆಂಧ್ರದಲ್ಲಿ ವೇಮನ ಅವರು ಮಹಾನ್ ಯೋಗಿಯಾಗಿದ್ದಾರೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ವೇಮನ ನಂಬಿಕೆ ಇಟ್ಟಿದ್ದರು. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು. ತಮ್ಮ ತತ್ವಪದಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದರು. ವೇಮನರ ತತ್ವ, ಸಿದ್ಧಾಂತ ಸರ್ವ ಸಮುದಾಯಕ್ಕೂ ತಲುಪಬೇಕು. ಅವರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು.

ರೆಡ್ಡಿ ಸಮುದಾಯದ ಹಿರಿಯರಾದ ಚಂದ್ರಶೇಖರ ದೇವರೆಡ್ಡಿ ಮಾತನಾಡಿದರು. ಶರಣರ ಜೀವನ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸೇರಿದಂತೆ ರೆಡ್ಡಿ ಸಮುದಾಯದ ಮುಖಂಡರು ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಬಿ.ಎಂ ಬಿರಾದಾರ, ಎಂ.ಎಸ್ ಪಾಟೀಲ, ಅಶೋಕ ಬಿರಾದಾರ, ಬಸವರಾಜ ಕೋಳೂರ, ಜಿ.ಬಿ ಡಿಗ್ಗಾವಿ, ಅಪ್ಪುಗೌಡ ಕೋಟಿ, ಸಿದ್ದನಗೌಡ ಐನಾಪೂರ, ಗೇಡ್-2 ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ, ಶಿರಸ್ತೇದಾರ್ ರಾಘವೇಂದ್ರ ಜೋಶಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.