ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿವೃತ್ತ ನೌಕರರಿಂದ ಮನವಿ

Jan 31, 2025 - 00:35
 0
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿವೃತ್ತ ನೌಕರರಿಂದ ಮನವಿ

ಸಿಂದಗಿ: ೭ನೆಯ ವೇತನ ಆಯೋಗದ ಲೆಕ್ಕಾಚಾರದ ಅನುಗುಣವಾಗಿ ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಬೇಕು ಎಂದು ತಾಲೂಕು ಸಂಚಾಲಕ ಬಿ.ಎಸ್.ಬೂದಿಹಾಳ ಒತ್ತಾಯಿಸಿದರು.


ಸಿಂದಗಿ ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಬೆಂಗಳೂರು, ತಾಲೂಕು ಘಟಕ ವತಿಯಿಂದ ಜು.೦೧,೨೦೨೨ ರಿಂದ ಜು.೩೧೨೦೨೪ರ ಅವಧಿಯಲ್ಲಿ ನಿವೃತ್ತರಾದ ನೌಕಕರಿಗೆ ಡಿಸಿಆರ್‌ಜಿ ಕಮ್ಯುಟೇಶನ್‌ಗಳಿಗೆ ರಜೆ ನಗದೀಕರಣ ಮೊತ್ತವನ್ನು ೭ನೆಯ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಂಗೀರಕರಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ನಿವೃತ್ತ ನೌಕರರಿಗೆ ಪ್ರತಿಭಟನೆಗೆ ಇಳಿಸುವುದು ಸರಿಯಲ್ಲ. ನಾವೇನೂ ಸಾಲ ಕೇಳ್ತಾ ಇಲ್ಲ. ಸುದೀರ್ಘ ವರ್ಷಗಳ ಕಾಲ ಕಾರ್ಯನಿರ್ವಹಿಸಿದಕ್ಕೆ ನ್ಯಾಯ ಕೊಡಬೇಕು. ನಿವೃತ್ತರಾದ ನಮಗೆ ಬೀದಿಗೆ ಇಳಿಯದಂತೆ ಮಾಡಬೇಡಿ ಎನ್ನುವುದು ಆಗ್ರಹವಾಗಿದೆ ಎಂದರು.


ಈ ವೇಳೆ ನಿವೃತ್ತ ಶಿಕ್ಷಕ ಪ್ರಭುಲಿಂಗ ಲೋಣಿ ಮಾತನಾಡಿ, ಚಳಿಗಾಲ ಅಧಿವೇಶನದ ಸುವರ್ಣಸೌಧದ ಮುಂಭಾಗದಲ್ಲಿ ನಿವೃತ್ತ ನೌಕಕರು ಸಮಾವೇಶಗೊಂಡಾಗ ಸಚಿವ ಸತೀಶ ಜಾರಕಿಹೊಳಿ ಹಾಗೂ ಸರಕಾರದ ಕಾರ್ಯದರ್ಶಿ ಪಿ.ಎಸ್.ಜಾಫರ್ ಅವರು ಆಗಮಿಸಿ ಸರಕಾರದ ವತಿಯಿಂದ ಮನವಿ ಸ್ವೀಕರಿಸಿದ್ದು, ಚಳಿಗಾಳ ಅಧಿವೇಶನ ಮುಗಿದ ಬಳಿಕ ವೇದಿಕೆಯ ಮುಖಂಡರನ್ನು ಆಹ್ವಾನಿಸಿ ಸಭೆ ಕರೆಯಲಾಗುವುದು ಎಂದದ್ದ ಅವರು ಇನ್ನೂ ಸಭೆ ಏರ್ಪಾಡು ಮಾಡಿರುವುದಿಲ್ಲ. ಹಾಗಾಗಿ ಒಂದುವಾರದೊಳಗೆ ವೇದಿಕೆಯ ಮುಖಂಡರೊಂದಿಗೆ ಸಭೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ಇದೇ ಸಂದರ್ಭದಲ್ಲಿ ಕೆ.ಡಿ.ಕಟಗಿಗಾಣ, ಜಿ.ಆಯ್.ಲೋಣಿ, ವಿ.ಡಿ.ಪಾಟೀಲ, ಬಿ.ಎಸ್.ಬೂದಿಹಾಳ, ಎಸ್.ಡಿ.ಕಟಗಿಗಾಣ, ರೇಖಾ ಕುಲಕರ್ಣಿ, ನಾವಿ, ಕಂಟಿಗೊಂಡ, ಕಕ್ಕಳಮೇಲಿ, ಗಡಗಿ, ಧರಿಕಾರ, ಯರನಾಳ ಸೇರಿದಂತೆ ತಾಲೂಕಿನ ನಿವೃತ್ತ ನೌಕಕರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.