ಪಿಕೆಪಿಎಸ್ ಅಧ್ಯಕ್ಷರಾಗಿ ಶಾಂತವೀರ ಬಿರಾದಾರ ಆಯ್ಕೆ

ಸಿಂದಗಿ: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಶಾಂತವೀರ ಎಸ್ ಬಿರಾದಾರ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕೆ ಬಿ ಪಾಟೀಲ ಘೋಷಿಸಿದರು.
ಉಪಾಧ್ಯಕ್ಷರಾಗಿ ಶ್ಯಾಯಪ್ಪ ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಇಂಡಿ ಸಹಾಯಕ ನಿಬಂಧಕ ಕನಕರಾಜ ವಡ್ಡರ, ಸಿಬ್ಬಂದಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಮಲಗೊಂಡ, ಶಶಿಕಾಂತ ಕುಂಬಾರ, ರಾಹುಲ, ನಾಗವಿ ಮನೋಜ ಬಿರಾದಾರ, ವಿಶ್ವರಾದ್ಧ್ಯ ಬಿರಾದಾರ, ಮಂಜುನಾಥ್ ಚೌಹಾಣ, ಹೇಮಾ ನಾವಿ, ಸದಸ್ಯರಾದ ಮಾಳು ಪೂಜಾರಿ, ಇರಗಂಟೆಪ್ಪಾ ಪೂಜಾರಿ, ಸಾವಿತ್ರಿ ವಿಭೂತಿ ಹಳ್ಳಿ ಸಂಘದ ಸದಸ್ಯರು, ಸೇರಿದಂತೆ ಇನ್ನಿತರರು ಹಾಜರಿದ್ದರು.