ಮುಸ್ಲಿಂ ದೇವರಿಗೆ ಹಿಂದು ಪೂಜಾರಿ : ಭಾತೃತ್ವ ಬೆಸೆಯುವ ಯಂಕಂಚಿ ದಾವಲ್ ಮಲೀಕ್ ಜಾತ್ರೆ

Feb 2, 2025 - 01:08
 0
ಮುಸ್ಲಿಂ ದೇವರಿಗೆ ಹಿಂದು ಪೂಜಾರಿ : ಭಾತೃತ್ವ ಬೆಸೆಯುವ ಯಂಕಂಚಿ  ದಾವಲ್ ಮಲೀಕ್ ಜಾತ್ರೆ

ಮಲ್ಲಿಕಾಜು೯ನ ಎನ್.ಕೆೆಂಭಾವಿ

ಬ್ರಹ್ಮದೇವನಮಡು  : ಉತ್ತರ ಕರ್ನಾಟಕದಲ್ಲಿ ಭಾತೃತ್ವದ ಬೆಸೆಗೆ ಹೊಂದಿರುವ ಎರಡು ಸಮುದಾಯಗಳ ಆರಾಧ್ಯ ದೈವವೊಂದು ತಾನು ಮುಸ್ಲಿಂ ಅದರೊ ಹಿಂದೂ ಪೂಜಾರಿಗಳ ಸಂಪ್ರದಾಯಿಕೆಗೆ ಒತ್ತು ನೀಡಿರುವುದು ವಿಶೇಷ.


ಇಂತಹ ವಿಶೇಷತೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿ ಗ್ರಾಮದಲ್ಲಿ ಕೋಮು ಸೌಹಾರ್ದ ನೆಲೆಯಲ್ಲಿ ತನ್ನದೇ ಆದ್ ಭಕ್ತ ಸಮೂಹವನ್ನು ಹೊಂದಿರುವ ಸಂತ್ ದಾವಲ್ ಮಲೀಕ್ ಸೊಫಿ ದೈವ ತನ್ನಲ್ಲಿ ಪವಾಡ ಶಕ್ತಿಯನ್ನಿಟ್ಟುಕೊಂಡು ಬಹುತೇಕ ಮಹಾರಾಷ್ಟ್ರ,ಆಂದ್ರಪ್ರದೇಶ ಸೇರಿದಂತೆ ರಾಜ್ಯದ ಮೊಲೆ ಮೊಲೆಯಲ್ಲಿ ಭಕ್ತರನ್ನು ಹೊಂದಿದೆ.ಇಲ್ಲಿ ದೈವ ಮುಸ್ಲಿಂ ಆದರೂ ಪೂಜಾರಿಕೆ ಮಾತ್ರ ಹಿಂದುಗಳಿದ್ದು,ಇದು ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.ಇಲ್ಲಿನ ದೈವದ ಭಕ್ತ ವರ್ಗದಲ್ಲಿ ಭಾವಗಳು, ಜೋಗಪ್ಪಗಳು ಹಾಗೂ ಪೂಜಾರಿಗಳು ಇದ್ದಾರೆ. ನೂರಾರು ವರ್ಷಗಳ ಹಿಂದೆ ನೆಲೆಸಿದ್ದ ಸಂತ ದಾವಲ್ ಮಲೀಕ್ ತಮ್ಮ ಪವಾಡಗಳಿಂದ ಇಲ್ಲಿನ ಜನರನ್ನು ಉದ್ದರಿಸುತ್ತ.ದೈವ ನಂಬಿ ಬಂದವರಿಗೆ ದೇವರಾಗಿ,ಮೌಢ್ಯ ಕಂಡು ಬಂದವರಿಗೆ ಮೌನಿಯಾಗಿ ತನ್ನ ಭಕ್ತ ವರ್ಗವನ್ನು ಸಂತೈಸುತ್ತಿರುವ ದಾವಲ್ ಮಲೀಕ್ ಜಾತ್ರೆ ಸಂಭ್ರಮದಿಂದ ಜರುಗಲಿದೆ.


ಜಾತ್ರೆಯಲ್ಲಿ ಭಕ್ತರು ತಮ್ಮ ಭಕ್ತಿ ಅನುಸಾರವಾಗಿ ದೇವರಿಗೆ ವಿವಿಧ ತರಹದ ನೈವೇದ್ಯಗಳನ್ನು ಅರ್ಪಿಸುತ್ತ.ಹಿಂದೂ ಹಾಗೂ ಮುಸ್ಲಿಂ ಭಾಂದವರು ಒಡಗೊಡಿ ದೀರ್ಘ ದಂಡ ನಮಸ್ಕಾರಗಳನ್ನು ಹಾಕುತ್ತ.ಇಷ್ಟದ ದೇವರನ್ನು ನೆನೆಸುತ್ತ ತಮ್ಮ ಭಕ್ತಿ ಮೆರೆಯುತ್ತಾರೆ, ಪೂಜಾ ಆಚರಣೆಗಳು ಮುಸ್ಲಿಂ ಸಂಪ್ರದಾಯದಂತೆಯೇ ನಡೆಯುತ್ತಿದ್ದು,ದೀಪ ಹಾಗೂ ಗಂಧದ ದಿನ ಕೆಲವರು ತಮ್ಮ ಹರಿಕೆಯನ್ನು ತೀರಿಸುತ್ತಾರೆ.


ವಿವಿಧ ಧಾಮಿ೯ಕ ಕಾಯ೯ಕ್ರಮಗಳು : 
ಯಂಕಂಚಿ ದಾವಲ್ ಮಲೀಕ್ ಜಾತ್ರೆ ನಿಮಿತ್ಶ ಫೆ.2 ರಂದು ಮುಜಾವರ ಮನೆಯಿಂದ ದೇವರ ಪಲ್ಲಕ್ಕಿ ಉತ್ಸವವು ರಾತ್ರಿ 1 ಗಂಟೆಗೆ ವಿಜೃಂಭಣೆಯಿಂದ ಹೊರಟು ಬೆಳಗ್ಗೆ 3-15 ಕ್ಕೆ ದೇವಸ್ಥಾನ ತಲಪುವುದು. ನಂತರ ಬೆಳಗ್ಗೆ 4 ಗಂಟೆಗೆ ಗಂಧ ಏರುವುದು. ಫೆ.3 ರಂದು ದೀಪೋತ್ಸವ ವಿಶೇಷ ಜಾತ್ರೆ ನಡೆಯಲಿದೆ. ನಂತರ ರಾತ್ರಿ 9 ಗಂಟೆಗೆ ಸ್ನೇಹ ಸಿಂಚನ ಮೇಲೋಡಿಸ್ ಇವರಿಂದ ರಸ ಮಂಜರಿ ಕಾಯ೯ಕ್ರಮ ನಡೆಯಲಿದೆ. ಫೆ.4 ರಂದು ಬೆಳಗ್ಗೆ 8 ರಿಂದ ರಾತ್ರಿ 5 ಗಂಟೆವರೆಗೆ ವಿವಿಧ ಧಾಮಿ೯ಕ ಕಾಯ೯ಕ್ರಮಗಳು ನಡೆಯಲಿವೆ. ಫೆ.4 ರಂದು ಬೆಳಗ್ಗೆ 10 ಗಂಟೆಗೆ ಭಾರ ಎತ್ತುವ ಸ್ಪಧೆ೯,ಚೀಲ್ ಎತ್ತುವ ಸ್ಪಧೆ೯,ಗುಂಡು ಎತ್ತುವ ಸ್ಪಧೆ೯,ಸಂಕ್ರಾಣಿ ಕಲ್ಲು ಎತ್ತುವ ಸ್ಪಧೆ೯ ನಡೆಯಲಿದೆ. ಫೆ.5 ರಂದು ಕುಸ್ತಿ ಪಂದ್ಶ ನಡೆಯಲಿದೆ. ಫೆ.6 ರಂದು ದೇವಸ್ಥಾನದಿಂದ ರಾತ್ರಿ 10 ಗಂಟೆಯಿಂದ ದೇವರ ಪಲ್ಲಕ್ಕಿ ಉತ್ಸವವು ರಾತ್ರಿ 1-30 ಗಂಟೆಯವರೆಗೆ ಮುಜಾವರ ಮನೆಗೆ ಬಹು ವಿಜೃಂಭಣೆಯಿಂದ ತಲುಪುವುದು. ಫೆ.4 ರಿಂದ 6ರವರೆಗೆ ಧನಗಳ ಜಾತ್ರೆ ನಡೆಯಲಿದೆ.


ಪವಾಡ ಪುರಷ ನೂರಾರು ವಷ೯ಗಳ ಹಿಂದೆ ನೆಲೆಸಿದ್ದ ಸೊಫಿ ಸಂತ್ ದಾವಲ್ ಮಲೀಕರು ಪವಾಡಗಳಿಂದ ಜನರನ್ನು ಉದ್ಧರಿಸುತ್ತ.ನಂಬಿ ಬಂದವರಿಗೆ ದೇವರಾಗಿ,ಮೌಢ್ಶ ಕಂಡು ಬಂದವರಿಗೆ ಮೌನಿಯಾಗಿ ಸಂತೈಸುತ್ತಿದ್ದರು.

ವಿಶೇಷ ಸಂಪ್ರದಾಯ : 

ಸೂಫಿ ಸಂತ್ ದಾವಲ್ ಮಲೀಕ್ ಮುಸ್ಲಿಂ ಆದರೂ ಪೂಜಾರಿಕೆ ಮಾತ್ರ ಹಿಂದುಗಳಿದ್ದು, ಇದು ಹಲವಾರು ವಷ೯ಗಳಿಂದಲೂ ನಡೆದು ಬಂದ ಸಂಪ್ರದಾಯ.ಇಲ್ಲಿನ ದೈವದ ಭಕ್ತರಲ್ಲಿ ಬಾವಾಗಳು,ಜೋಗಪ್ಪಗಳು ಹಾಗೂ ಪೂಜಾರಿಗಳು ಇರುವುದು ವಿಶೇಷ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.