ಸಿಂದಗಿಯಲ್ಲಿ ಕ್ಯಾಂಟರ್-ಬೈಕ್ ಅಪಘಾತ : ಸವಾರ ಸಾವು

Feb 5, 2025 - 22:53
Feb 5, 2025 - 22:53
 0
ಸಿಂದಗಿಯಲ್ಲಿ ಕ್ಯಾಂಟರ್-ಬೈಕ್ ಅಪಘಾತ : ಸವಾರ ಸಾವು

ಸಿಂದಗಿ: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬೈಕ್ ಮತ್ತು ಕ್ಯಾಂಟರ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಶರಣಗೌಡ ಪಾಟೀಲ (೩೭) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.


ಮೃತನು ಆಲಮೇಲ ತಾಲೂಕಿನ ಅಲ್ಲೋಳ್ಳಿ ಗ್ರಾಮದ ಶರಣಗೌಡ ಪಾಟೀಲ ಎಂದು ತಿಳಿದು ಬಂದಿದೆ.

ಈತ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದರು.

ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ವಿಜಯಪುರ ರಸ್ತೆಯ ಕಡೆಯಿಂದ ಬಂದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

 ಪಿಎಸ್‌ಐ ಆರಿಫ್ ಮುಷಾಪುರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.