ವಿದ್ಯಾರ್ಥಿ ದೆಸೆಯಲ್ಲಿ ಸಮಯ ಸದುಪಯೋಗಪಡಿಸಿಕೊಳ್ಳಿ : ಮಯೂರ

ಸಿಂದಗಿ: ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಹವ್ಯಾಸವನ್ನು ರೂಪಿಸಿಕೊಂಡು ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ ಹೇಳಿದರು.
ಸಿಂದಗಿ ಪಟ್ಟಣದ ಹೊರವಲಯದಲ್ಲಿರುವ ಶ್ರೀಸಮರ್ಥ ವಿದ್ಯಾವಿಕಾಸ ವಿವಿದೋದ್ದೇಶ ಸಂಸ್ಥೆಯ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಪರೀಕ್ಷೆ ಎಂಬ ಭಯ ಬೇಡ. ಒಳ್ಳೆಯ ರೀತಿಯಿಂದ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತರುವಂತವರಾಗಿ. ತಂದೆ ತಾಯಿಗಳ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕು. ನಿಮ್ಮ ಬದುಕಿನಲ್ಲಿ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಸಮಯ ಓಡುತ್ತಿರುವ ಕಾಲಘಟ್ಟದಲ್ಲಿ ಸಮಯ ಪ್ರಜ್ಞೆ, ನಿರಂತರ ಕಲಿಕೆ, ಪಠ್ಯಯೋಜನೆ ಹಾಗೂ ಪ್ರಾಮಾಣಿಕತೆ ಅವಶ್ಯಕವಾಗಿದೆ. ನಿಮ್ಮ ಸಣ್ಣಪುಟ್ಟ ತಪ್ಪುಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಿಂದಗಿ ಸರ್ಕಾರಿ ಪಪೂ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಜಿ.ಎಸ್.ಮೋರಟಗಿ ಹಾಗೂ ರಾಂಪೂರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶರಣು ಅಂಕಲಗಿ ಮಾತನಾಡಿ, ಹತ್ತನೇ ತರಗತಿ ಹಂತ ವಿದ್ಯಾರ್ಥಿಗಳಿಗೆ ನಿರ್ಣಾಯಕ ಹಂತ. ಇಲ್ಲಿ ಅತ್ಯುತ್ತಮ ಅಂಕಗಳಿಸಿ ಉನ್ನತ ವಿದ್ಯಾಭ್ಯಾಸ ಪಡೆಯುವುದು ಸಾಮಾನ್ಯ. ಹೆತ್ತವರ ಒತ್ತಡದಿಂದ ಆಸಕ್ತಿಯಿರದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ದುರಂತಕ್ಕೆ ಎಡೆ ಮಾಡಿಕೊಡಳ್ಳಬೇಡಿ. ತಮಗೆ ಆಸಕ್ತಿಯಿರುವ ವಿಷಯದಲ್ಲಿ ಅಧ್ಯಯನ ಮಾಡಿ ಯಶಸ್ಸು ಕಾಣಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಮಾಜ ಹಾಗೂ ಕುಟುಂಬದ ಆಸ್ತಿಯಿದ್ದಂತೆ. ನಿಮ್ಮನ್ನು ನೀವು ಅರಿಯುವ ಮುಖೇನ ಗುರಿ ಸಾಧಿಸಿ ಎನ್ನುವ ಕಿವಿಮಾತು ಹೇಳಿದರು.
ವೇದಿಕೆಯ ಮೇಲೆ ಸಂಸ್ಥೆ ನಿರ್ದೇಶಕ ಪಿ.ಡಿ.ಕುಲಕರ್ಣಿ ಮುಖ್ಯಗುರುಮಾತೆ ಸಾವಿತ್ರಿ ಅಸ್ಕಿ, ಎಮ್.ಪಿ.ಬುಕ್ಕಾ, ಶಾಲೆಯ ಪಾಲಕರ ಪ್ರತಿನಿಧಿ ವಿದ್ಯಾ ಚಿಕ್ಕಯ್ಯನಮಠ, ಮಹಿಳಾ ಸುರಕ್ಷತಾ ಸಂಘದ ಪ್ರತಿನಿಧಿ ಮಹಾನಂದ ವಿಜಯಕುಮಾರ್ ದೇವಣಗಾವ ಹಾಗೂ ಸುಹಾಸಿನಿ ಹಂಚಿನಾಳ, ಪ್ರಧಾನ ಕಾರ್ಯದರ್ಶಿ ನಂದಿನಿ ಚವ್ಹಾಣ ಇದ್ದರು.
ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ಸ್ನೇಹ ಬಂದೆ ಹಾಗೂ ಸೃಷ್ಟಿ ರೊಟ್ಟಿ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸತೀಶ ಕುಲಕರ್ಣಿ, ಕಿರಣ ಕುಲಕರ್ಣಿ, ದಾನಯ್ಯ ಹಿರೇಮಠ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಬಿ.ಎಸ್.ಪಾಟೀಲ, ಶ್ರೀಮತಿ ಎಮ್.ಜಿ.ಧ್ಯಾಮಗೊಂಡ, ಸುವರ್ಣಾ ಕಡಣಿ, ವಿ.ಎ.ನಾಯಕ, ಸುಜಾತಾ ನಾಯಕ, ಕುಮಾರಿ ಎಮ್.ಜಿ. ಬಳಗಾನೂರ, ಶಿಲ್ಪಾ ಎಸ್.ಪಾಟೀಲ, ವಿಜಯಲಕ್ಷ್ಮಿ ಅಲಾಳಮಠ ಬಿ.ಎಸ್.ಸಜ್ಜನ, ರೂಪಾ ಶಿವಸಿಂಪಿಗೇರ, ಸಾವಿತ್ರಿ ವಿರಾಪೂರ, ಆರ್.ಎಮ್. ಪಕೀರಪುರ, ವಿ.ಕೆ.ಚವ್ಹಾಣ ಸೇರಿದಂತೆ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.