ಕ್ರಾಂತಿವೀರ ಬ್ರಿಗೇಡ್ ಸಮಾರಂಭದಲ್ಲಿ ಹಾಲುಮತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ರವಿಕಾಂತ ನಾಯ್ಕೋಡಿ

ಸಿಂದಗಿ: ಹಿಂದುಳಿದ ಹಾಗೂ ಶೋಷಿತ ವರ್ಗಗಳ ಏಳಿಗೆಗಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಫೆ.೪ರಂದು ೧೦೦೮ ಸ್ವಾಮೀಜಿಗಳ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿರುವ ಕ್ರಾಂತಿವೀರ ಬ್ರಿಗೇಡ್ ಸಮಾರಂಭಕ್ಕೆ ಸಿಂದಗಿ ಹಾಗೂ ಆಲಮೇಲ ತಾಲೂಕಿನಿಂದ ಹಾಲುಮತ ಸಮುದಾಯ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಯುವ ಮುಖಂಡ ರವಿಕಾಂತ ನಾಯ್ಕೋಡಿ ಕರೆ ನೀಡಿದರು.
ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಕ್ರಾಂತಿವೀರ ಬ್ರಿಗೇಡ್ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಕಾರ್ಯಕ್ರಮವು ಒಂದು ಜಾತಿಗೆ ಅಥವಾ ಒಂದು ಪಕ್ಷಕ್ಕೆ ಸೀಮಿತವಾದುದ್ದಲ್ಲ ಬಡವರ ದೀನ ದಲಿತರ ಶೋಷಣೆಗೆ ಒಳಗಾದವರನ್ನು ಎತ್ತಿ ಹಿಡಿಯುವ ಕ್ರಾಂತಿವೀರ ಬ್ರಿಗೇಡ್ ನ ಮುಖ್ಯ ಗುರಿಯಾಗಿದೆ ಹೀಗಾಗಿ ಹಾಲುಮತ ಸಮುದಾಯ ಸೇರಿದಂತೆ ಇತರ ಹಿಂದುಳಿದ ವರ್ಗದವರು ಕೂಡಾ ಭಾಗವಹಿಸಬೇಕು ಕಾರ್ಯಕ್ರಮಕ್ಕೆ ೨೫೦ ರಿಂದ ೩೦೦ ವಾಹನಗಳು ತೈಯಾರಿಯಲ್ಲಿದೆ ಗ್ರಾಮೀಣ ಬಾಗದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘಟನೆಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಂಘದ ತಾಲೂಕ ಅಧ್ಯಕ್ಷ ನಿಂಗಣ್ಣ ಬಿರಾದಾರ, ನಾಗಪ್ಪ ಶಿವೂರ, ಶಿವು ಗಣಿಯಾರ, ಪ್ರಕಾಶ ಅಡವಿ, ಸಂಗಣ್ಣ ಮಗಣಗೇರಿ, ಸೇರಿದಂತೆ ಇತರರು ಇದ್ದರು.