ಶಿಕ್ಷಕ ವೃತ್ತಿ ಮಾಡುವವರು ಭಾಗ್ಯವಂತರು : ಗಂಗನಳ್ಳಿ

Feb 2, 2025 - 11:50
 0
ಶಿಕ್ಷಕ ವೃತ್ತಿ ಮಾಡುವವರು ಭಾಗ್ಯವಂತರು : ಗಂಗನಳ್ಳಿ

ಸಿಂದಗಿ : ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಶ್ರೇಷ್ಠ ಸೇವೆ ಶಿಕ್ಷಕ ಸಮುದಾಯದವರು ಎಲ್ಲ ಕ್ಷೇತ್ರಗಳನ್ನು ಬೆಳೆಸುವಂತಹ ಗಾರುಡಿಗರು ಎಂದು ವಿಶ್ರಾಂತ ಪ್ರಾಚಾರ್ಯರ ಎನ್ ಆರ್ ಗಂಗನಳ್ಳಿ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ ಆವರಣದಲ್ಲಿ ಅಧಿಕಾರ ಹತ್ತಾಂತರ ಸಮಾರಂಭದಲ್ಲಿ ನೌಕರ ವರ್ಗದವರು ಒಂದು ದಿನ ನಿವೃತ ಹೊಂದುವದು ಸಹಜ ಆದರೆ ಸೇವೆ ಮಾಡುವಾಗ ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಹಿರಿಯ ಉಪನ್ಯಾಸಕ ಬಸನಗೌಡ ಬಿರಾದಾರ ಮಾತನಾಡಿ ನಮ್ಮ ಕಾಲೇಜಿನಲ್ಲಿ ಎನ್ ಆರ್ ಗಂಗನಳ್ಳಿ  ಅವರು ತಮ್ಮ ಸೇವೆ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ. ಅವರ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಉಪನ್ಯಾಸಕ ಶಶಿದರ ಅವಟಿ ಮಾತನಾಡಿ  ಸಮಾಜಮುಖಿ, ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಸಮಾಜ ಯಾವತ್ತೂ ಋಣಿಯಾಗಿರುತ್ತದೆ ಎಂಬುದಕ್ಕೆ ಗಂಗನಳ್ಳಿ ಸರ್ ಅವರಿಗೆ ಸಲ್ಲುತ್ತದೆ ಎಂದರು.
 
ಕಾಲೇಜಿನ ಪ್ರಭಾರಿ ಪ್ರಾಚಾರ್ಯರ ಹುದ್ದೆಯ  ಅಧಿಕಾರವಹಿಸಿದ ಜಿ ಎಸ್  ಮೋರಟಗಿ ಮಾತನಾಡಿ ಇಂದು  ಸೇವಾ ನಿವೃತ್ತಿಯಾದ ಗಂಗನಳ್ಳಿ ಸರ್ ಅವರು ಉತ್ತಮ ಆರೋಗ್ಯವಂತವಾಗಿ ಜೀವನ ಸಾಗಲಿ ಎಂದರು.

ಉಪನ್ಯಾಸಕ ಎಂ ಎಂ ಯಾಳಗಿ, ಎಸ್ ಎಸ್  ಸುರಪೂರ, ಸಿದ್ದು ಹೊಳ್ಳಿ, ಜಟ್ಟು ಗಾಣಿಗೇರ, ಗುರುಸ್ವಾಮಿ ಹಿರೇಮಠ ಸೇರಿದಂತೆ ಇನ್ನಿತರರು ಇದ್ದರು.
ಎಸ್ ಎಸ್ ಪಾಟೀಲ ಸ್ವಾಗತಿಸಿದರು. ರಜಪೂತ ನಿರೂಪಿಸಿ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.