ಮನುಷ್ಯರ ಬಾಳಿನ ಜ್ಯೋತಿ ಸಿದ್ದೇಶ್ವರ ಸ್ವಾಮೀಜಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಹೊರ್ತಿ:'ಮನುಷ್ಯರ ಸುಂದರ ಬಾಳಿನ ಜ್ಯೋತಿ ಸಿದ್ದೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನಗಳು ಎಲ್ಲರಿಗೂ ದಾರಿದೀಪವಾಗಿವೆ' ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು
ಸಮೀಪದ ಕಾತ್ರಾಳ, ಬಾಲಗಾಂವ, ಆಕಳವಾಡಿ, ಬೋರ್ಗಿ ಈ ನಾಲ್ಕು ಗ್ರಾಮಗಳ ನಡುವೆಯಿರುವ ಗುರುದೇವ ಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಗುರು ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಕಿ ಶ್ರೀ, ಶಾಸಕ ವಿಠಲ ಕಟಕಧೋಂಡ, ಮಹಾಂತೇಶ ತದ್ದೇವಾಡಿಯ ಮಹಾಂತೇಶ ಶಾಸ್ತ್ರಿಜಿ, ಲಮಾನಟ್ಟಿಯ ತುಕಾರಾಮ ಮಹಾರಾಜ, ಉಮೇಶ ಕಾರಜೋಳ ಮಾತನಾಡಿದರು, ಕಾತ್ರಾಳ, ಬಾಲಗಾಂವ ಗುರುದೇವ ಯೋಗಾಶ್ರಮದ ಅಮೃತಾನಂದ ಶ್ರೀ ಸಾನಿಧ್ಯ ವಹಿಸಿದ್ದರು.
ಈ ವೇಳೆ ರಮೇಶ ಕರೋಶಿ, ಸಾಯಬಣ್ಣ ಮುಚ್ಚಂಡಿ, ನಿವೃತ್ತ ಶಿಕ್ಷಕ ಬಿರಾದಾರ, ಡಾ.ಗಣಪತಿ ಹೂಗಾರ ಹಾಗೂ ಸುತ್ತಲೀನ ಗ್ರಾಮಗಳ ಸಾವಿರಾರು ಭಕ್ತರು ಉಪಸ್ಥಿತರಿದ್ದರು. ರಮೇಶ ಕರೋಶಿ ಸ್ವಾಗತಿಸಿ-ನಿರೂಪಿಸಿದರು.