ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಸಂಗಮೇಶ್ವರ ಮಹಾರಾಜರು ಚಿತ್ರದ ಮೂರನೇ ಹಾಡು ಅನಾವರಣ

Feb 2, 2025 - 18:54
 0
ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಸಂಗಮೇಶ್ವರ ಮಹಾರಾಜರು ಚಿತ್ರದ ಮೂರನೇ ಹಾಡು ಅನಾವರಣ
ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾವೈಕ್ಯತೆಯ ತಾಣ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರಿಂದ "ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು" ಚಿತ್ರದ ಮೂರನೇ ಹಾಡು "ಜಯಪರಮಹಂಸ ಗುರುಪರಮಹಂಸ" ಬಿಡುಗಡೆಗೊಳಿಸಿದರು.

ವಿಜಯಪುರ :  "ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು" ಚಲನಚಿತ್ರದ ಮೂರನೇ ಲಿರಿಕಲ್‌ ವಿಡಿಯೋ ಹಾಡು ಫೆಬ್ರವರಿ 1ರಂದು ವಿಜಯಪುರ ಜಿಲ್ಲೆಯ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಜರಗುತ್ತಿರುವ ಪಂಚ ಋಷಿಗಳ ಪುಣ್ಯ ಸ್ಮರಣೋತ್ಸವದ ಮಾಘ ಸಪ್ತಾಹದ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಹಾಗು ಶುಭ ಹಾರೈಕೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ "ಜಯಪರಮಹಂಸ ಗುರುಪರಮಹಂಸ" ಲಿರಿಕಲ್ ಹಾಡು ಬಿಡುಗಡೆಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಿರ್ಮಾಪಕ ಮಾಧವಾನಂದ ವೈ ಶೇಗುಣಸಿ, ನಿರ್ದೇಶಕ ರಾಜರವಿಶಂಕರ್ (ವಿ. ರವಿ), ರವಿನಾರಾಯಣ್, ಸಂಕಲನಗಾರ ಆರ್ ಡಿ ರವಿ, ಪ್ರಕಾಶ ಕಾಲತಿಪ್ಪಿ, ನಟ ವಿಶ್ವಪ್ರಕಾಶ ಟಿ ಮಲಗೊಂಡ, ಮಹಾದೇವ ಮಹಾರಾಜರು ಭೂಕೈಲಾಸ ಮಂದಿರ ನಂದಗಾಂವ, ಹಣಮಂತಪ್ಪ ಮಹಾರಾಜರು ಕಲ್ಮೇಶ್ವರ ಆಶ್ರಮ ಶೇಗುಣಸಿ, ಸಿಎಂ ಕಾನೂನು ಸಲಹೆಗಾರ ಮುಕುಂದ ಬೆಳಗಲಿ, ಬಾಗಲಕೋಟೆ ಮಾಜಿ ಜಿ.ಪಂ ಉಪಾಧ್ಯಕ್ಷ ಸುಶೀಲ್ ಬೆಳಗಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಾವಿರಾರು ಶ್ರೀಮಠದ ಭಕ್ತರ ಉಪಸ್ಥಿತರಿದ್ದರು. 


ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಮಾರ್ಗದರ್ಶನದಲ್ಲಿ "ಮಾಧವಾನಂದ ಯೋ ಶೇಗುಣಸಿ" ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು " "ಜಯಪರಮಹಂಸ ಗುರುಪರಮಹಂಸ" ... ಗುರುಭಜನೆಯ ಸಾಲುಗಳ ಈ ಹಾಡನ್ನು ಎ ಟಿ ರವೀಶ್ ಗಾಯನದ ಜೊತೆಗೆ ಸಂಗೀತ ನೀಡಿದ್ದಾರೆ. 

ಹೊಸ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ವಿಶ್ವಪ್ರಕಾಶ ಟಿ ಮಲಗೊಂಡ, ಭವ್ಯಶ್ರೀ ರೈ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜಾ ರವಿಶಂಕರ್ (ವಿ ರವಿ) ನಿರ್ದೇಶನ, ಸಿ ನಾರಾಯಣ್ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ, ಡಿ. ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.