ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳು ಮೈಗೂಡಿಸಿಕೊಳ್ಳುವುದು ಅಗತ್ಯ : ಶಿಕ್ಷಕ ರೂಗಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಸಿಂದಗಿ : ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಿಂದ ತಾವು ಎಷ್ಟೇ ಅಂಕಗಳು, ಪದವಿ ಗಳಿಸಿ, ಸಂಸ್ಕಾರ, ಮಾನವೀಯ ಮೌಲ್ಯಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಪ್ರಯೋಜನವಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಪ್ರಯತ್ನಶೀಲತೆ, ಶೃಜನಶೀಲತೆ, ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡು ಮುನ್ನೆಡೆದರೆ, ಉನ್ನತ ಸಾಧನೆ ಸಾಧಿಸುವದರ ಜೊತೆಗೆ ನಿಮ್ಮ ಜೀವನ ಸುಂದರವಾಗಲು ಶಿಕ್ಷಕರು ತೋರಿರುವ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಕಲಬುರಗಿ ಪ್ರಾಥಮಿಕ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ನಿಂಗಣ್ಣ ರೂಗಿ ಹೇಳಿದರು.
ತಾಲೂಕಿನ ಕೋರವಾರ ಗ್ರಾಮದ ಸರಕಾರಿ ಮಾದರಿ ಹಿರಿಯ ಹೆಣ್ಣು ಮಕ್ಕಳ ಶಾಲೆಗೆ ನೂತನವಾಗಿ
ಹಿರಿಯ ಮುಖ್ಯ ಗುರು ಪುಂಡಲಿಕ ಎಸ್ ಜಾಲವಾದಿ ಅವರಿಗೆ ಬೆಳ್ಳಿ ಖಡ್ಗ ಹಾಕಿ ಅದ್ಧೂರಿ ಸ್ವಾಗತ ಮಾಡಿರುವ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ನೂತನವಾಗಿ ಹಿರಿಯ ಮುಖ್ಯ ಗುರು ಪುಂಡಲಿಕ ಜಾಲವಾದಿ ಅವರು ಮೂಲತ ಸಿಂದಗಿ ತಾಲೂಕಿನ ಬಗಲೂರ ಗ್ರಾಮದವರು ಅವರ ಶಿಕ್ಷಕರ ವೃತ್ತಿಯನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹರ್ಕಾಡಿ ಶಾಲೆಯಲ್ಲಿ ಪ್ರಾರಂಭಿಸಿ ತದನಂತರ ವರ್ಗಾವಣೆಗೊಂಡು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಶಾಲೆಯಲ್ಲಿ 6 ತಿಂಗಳ ಸೇವೆ ಸಲ್ಲಿಸಿ ತದನಂತರ ವರ್ಗಾವಣೆಯಲ್ಲಿ ಜೇವರ್ಗಿ ತಾಲೂಕಿನ ಕಲ್ಲೂರ ಕೆ.ರಂಜಣಗಿ ಮತ್ತು ಯಾತನೂರ ಹಾಗೂ ಜೇವರ್ಗಿ ತಾಲೂಕಿನ ಕಲ್ಲೂರ ಕೆ ಶಾಲೆಯಲ್ಲಿ ಸುಮಾರು14 ವರ್ಷ ಸೇವೆಯನ್ನು ಸಲ್ಲಿಸಿ 2024/25 ನೇ ಸಾಲಿನ ವಿಭಾಗದ ಹೊರಗಿನ ಮುಖ್ಯ ಗುರುಗಳ ವರ್ಗಾವಣೆಯಲ್ಲಿ ತಾಲ್ಲೂಕಿನ ಸ.ಹೆ.ಮ.ಮಾ.ಪ್ರಾ.ಶಾಲೆ ಕೊರವಾರ ಶಾಲೆಗೆ ಹಿರಿಯ ಬಡ್ತಿ ಮುಖ್ಯ ಗುರುಗಳಾಗಿ ವರ್ಗಾವಣೆಯಾಗಿ ಪುಂಡಲೀಕ ಜಾಲವಾದಿ ಯವರು ಹಾಜರಾದರು ಅವರನ್ನು ಅಪಾರ ಅಭಿಮಾನಿ ಬಳಗ ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಶಾಲೆಗೆ ಬರಮಾಡಿಕೊಂಡರು ವಿಷಯ ಸಂತೋಷ ನೀಡುತ್ತದೆ ಎಂದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ .ಎಂ ಜಿ ಯಂಕಂಚಿ, ಜಿ ಪಿ ಬಿರಾದಾರ, ಎ ಎಚ್ ವಾಲಿಕರ್, ಚಂದ್ರಶೇಖರ ಬಿ ಗಡಗಿ, ಬಸವರಾಜ್ ಸೋಮಪೂರ, ಲಕ್ಷ್ಮಣ ಎಸ್ ಸೊನ್ನ, ಎಂ ಎಸ್ ಚೌಧರಿ, ರಾಯಪ್ಪ ಬಿ ಇವಣಗಿ, ಪಿ ಬಿ ಪೂಜಾರಿ, ಎನ್.ಎಸ್ ನಾಗೂರ, ಶಿಕ್ಷಣ ಸಂಯೋಜಕರ ಬಿ ಬಿ ಪಾಟೀಲ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಾಬು ನಡುವಿನಕೆರಿ, ಹಿರಿಯ ಮುಖ್ಯಗುರು ಆರ್ ಕೆ ಪಾಟೀಲ, ಸಿದ್ದಣ್ಣ ಬತಗುಣಕಿ, ಎಸ್ ಎಂ ಬಿರಾದಾರ, ನಿಕಟಪೂರ್ವ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮುನಿರ್ ಅಹ್ಮದ್ ಲಾಲ್ ಸಿಂಗ್ ಪವಾರ, ಪ್ರೌಢ ಶಾಲಾ ದೈಹಿಕ ಶಿಕ್ಷಕ ಆರ್ ಆರ್ ನಿಂಬಾಳ್ಕರ್ , ಮಾಳಪ್ಪ ಹೊಸೂರ, ಪ್ರವೀಣ್ ಬಿರಾದಾರ, ಲೋಕೇಶ್ ಶಿವಣಗಿ, ಸುಭಾಷ ಪಾಟೀಲ್ , ನೀಲಕಂಟ ಗೋಡೆಕರ್, ಸೋಮನಗೌಡ ಬಿರಾದಾರ,
ದೈ ಶಿ ಬಸವರಾಜ ನಾಗರಾಳ, ಎಸ್ ಎಂ ಪೂಜಾರಿ, ಶಿಕ್ಷಕರಾದ ರುದ್ರಯ್ಯ ಗಂಗನಹಳ್ಳಿ ಯಮನಪ್ಪ ಬಡದಾಳ, ಬಸವರಾಜ ಹಳ್ಳಿ , ನಾಯ್ಕೋಡಿ ಬಿರಾದಾರ ಎಂ ಎನ್ ಗಿರಣಿ, ಕೆಬಿಎಂಪಿಎಸ್ ಮುಖ್ಯ ಗುರುಗಳು ಸಿಬ್ಬಂದಿ ವರ್ಗ ಹಾಗೂ ಕೆ ಜಿ ಎಮ್ ಪಿ ಎಸ್ ಶಾಲೆಯ ಪ್ರಭಾರ ಮುಖ್ಯಗುರು ಎ ಜಿ ದೇಶಪಾಂಡೆ ಹಾಗೂ ಶಾಲಾ ಸಿಬ್ಬಂದಿ ವರ್ಗ ಅಪಾರ ವಿದ್ಯಾರ್ಥಿಗಳು ಹಾಜರಿದ್ದರು.