ರಾಷ್ರ‍್ಟಮಟ್ಟದ 'ಸರಸ್ವತಿ ಸಾಧಕ ಸಿರಿ' ಪ್ರಶಸ್ತಿಗೆ ಆಯ್ಕೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ದಾವಣಗೆರೆಯ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ೭೦ನೇ ವಾರ್ಷಿಕೋತ್ಸವ ಹಾಗೂ ಕನ್ನಡ ನಿತ್ಯೋತ್ಸವದ ಅಂಗವಾಗಿ ಕೊಡಮಾಡುವ ೨೦೨೫ನೇ ಸಾಲಿನ ರಾಷ್ರ‍್ಟಮಟ್ಟದ 'ಸರಸ್ವತಿ ಸಾಧಕ ಸಿರಿ' ಪ್ರಶಸ್ತಿಗೆ ನಗರದ ಮೂವರು ಸಾಧಕರು ಆಯ್ಕೆಯಾಗಿದ್ದಾರೆ.
ಸಾಹಿತ್ಯ ಕೃಷಿಯಲ್ಲಿ ಮಾಡಿರುವ ಸಾಧನೆಗಾಗಿ ಬಸವ ಜನ್ಮಭೂಮಿ ಪ್ರತಿಷ್ಠಾನದ ಸಂಚಾಲಕˌ ಸಾಹಿತಿ ಮುರುಗೇಶ ಸಂಗಮ ಮತ್ತು ಕವಯತ್ರಿ ಈರಮ್ಮ ಬೋನೂರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿಕ್ಷಕಿ ತಾರಾಮತಿ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದ್ದು ˌ ಎ.೨೭ ರಂದು ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಈ ಮೂವರು ಸಾಧಕರಿಗೆ ರಾಷ್ರ‍್ಟಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.