ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ : ಸಂಗಮೇಶ ಬಬಲೇಶ್ವರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.
ರಾಜ್ಯ ಬಾಲವಿಕಾಸ ಅಕಾಡೆಮಿ, ಧಾರವಾಡ, ಜಿಲ್ಲಾಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನಗರದ ಶಿವಶರಣ ಶ್ರೀ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಬುಧವಾರದಂದು ಆಯೋಜಿಸಿದ ಎಸ್.ಎಸ್.ಎಲ್.ಸಿ ಮಾರ್ಗದರ್ಶಿ ಸಾಹಿತ್ಯ ಪುಸ್ತಕ ವಿತರಣಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಬಾಲ ಮಂದಿರದಲ್ಲಿರುವ ಮಕ್ಕಳು ಬೀದಿ ಬದಿಯಲ್ಲಿ ಚಿಂದಿ ಆಯುವ, ಬಡ ಕೂಲಿಕಾರ್ಮಿಕರ ಮಕ್ಕಳು ಇಂತಹ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರು ಶ್ರಮಿಸಬೇಕು. ಈ ನಿಟ್ಟಿನಲ್ಲಿ ೪ ಜಿಲ್ಲೆಗಳಲ್ಲಿ ಮಾರ್ಗದರ್ಶಿ ಸಾಹಿತ್ಯ ಪುಸ್ತಕಗಳನ್ನು ವಿತರಿಸಲಾಗುವುದು ಎಂದರು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ, ಪರಿಪೂರ್ಣ ಜ್ಞಾನ ನೀಡುವ ಉದ್ದೇಶದಿಂದ ರಚಿಸಲಾಗಿರುವ ಮಾರ್ಗದರ್ಶಿ ಸಾಹಿತ್ಯ ಪುಸ್ತಕವನ್ನು ಶಿಕ್ಷಕರು ಬಳಿಸಿಕೊಳ್ಳಬೇಕೆಂದು ತಿಳಿಸಿದರು. ವಿದ್ಯಾಭ್ಯಾಸದ ಮೈಲಿಗಲಾಗಿರುವ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದರೆ ಮುಂದಿನ ವಿದ್ಯಾಭ್ಯಾಸದ ಪಯಣ ಸುಗಮವಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ ಅಭ್ಯಾಸ ಹಾಗೂ ಪುನರಮನನವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಮುಖ್ಯ ಪಾತ್ರವಾಗಿರುತ್ತದೆ.
ಈ ಸಲ ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶ ಗಳಿಸಲು ಪೂರ್ವಭಾವಿ ಪರೀಕ್ಷೆಯನ್ನು ಮುಖ್ಯ ಪರೀಕ್ಷೆ ಮಾದರಿಯಲ್ಲಿಯೇ ಮಾಡಬೇಕು. ಕ್ಯಾಮರಾ, ಅಂತರಜಾಲ ವ್ಯವಸ್ಥೆ, ಯುಪಿಎಸ್ ವ್ಯವಸ್ಥೆ ಮಾಡಬೇಕು. ಅನಿಮಿಯಾ ಮುಕ್ತ ವಿಜಯಪುರ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಈoಟiಛಿ ಂಛಿiಜ, ಕಬ್ಬಿಣಾಂಶಯುಕ್ತ ಟ್ಯಾಬ್ಲೇಟ್‌ಗಳನ್ನು ಕೋಡಬೇಕು. ೨೦ ಅಂಶಗಳ ಕಾರ್ಯಕ್ರಮದ ಅನಿಷ್ಠಾನಕ್ಕಾಗಿ ಶಿಕ್ಷಕರ-ಪೋಷಕರ ಸಭೆ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರದ ಬಿಇಓ ಬಸವರಾಜ ತಳವಾರ, ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ.ಬಿರಾದಾರ, ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕೌಲಗಿ, ಡಿಡಿಪಿಐ ಟಿ.ಎಸ್.ಕೋಲಾರ(ಆಡಳಿತ), ಡಿಡಿಪಿಐ ಉಮಾದೇವಿ ಸೊನ್ನದ, ಬಿಇಓಗಳಾದ ಸುಜಾತಾ ಹುನೂರ, ಪ್ರಮೋದಿನಿ ಬಳೋಲ ಮಟ್ಟಿ, ಶ್ರೀ ಆಲಗೂರ, ಎಂ.ಬಿ.ಯಡ್ರಾಮಿ, ಬಸವರಾಜ ಸಾವಳಗಿ, ಶಿಕ್ಷಣಾಧಿಕಾರಿ ಅಶೋಕ ಲಿಮಕರ, ಎಲ್.ಎಸ್.ಬಿರಾದಾರ ಹಾಗೂ ಇತರರು ಉಪಸ್ಥಿತರಿದ್ದರು.