ಸಾಮ್ರಾಟ್ ಶೆಟ್ಟಿಗೆ ನಟ ಧ್ರುವ ಸರ್ಜಾ ಸಾಥ್

"ಶಭಾಷ್ ಬಡ್ಡಿ ಮಗನೆ" ಚಿತ್ರದ ಬಾರೆ ಬಾರೆ ಜಿಂಕೆಮರಿ ಲಿರಿಕಲ್ ಸಾಂಗ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿದ್ದಾರೆ.
ಹಾಡು ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಾಮ್ರಾಟ್ ಶೆಟ್ಟಿ ಹಾಗೂ ಕಾವ್ಯ ರಮೇಶ್ ಮುದ್ದಾಗಿ ಸಾಂಗಿನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಸೆಕೆಂಡ್ ಹೀರೋ ಆಗಿ ಸಾಮ್ರಾಟ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಫುಲ್ ಸಾಂಗ್ ನೋಡಿ ಧ್ರುವ ಸರ್ಜಾ ಅವರು ಈ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರವನ್ನು ಬಿಎಸ್ ರಾಜಶೇಖರ್ ನಿರ್ದೇಶನ ಮಾಡಿದ್ದು, ಚೈತ್ರ ಪ್ರಕಾಶ್ ರವರು ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಸಿದ್ಧಿ ಸಂಗೀತ ನಿರ್ದೇಶನ , ಅಣಜಿ ನಾಗರಾಜ್ ಛಾಯಾಗ್ರಹ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ್ ನೃತ್ಯ ಸಂಯೋಜನೆ ಹಾಗೂ ಚಿನ್ನಯ್ಯ ರವರು ಫೈಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಚಿತ್ರದಲ್ಲಿ ಬಹುತಾರಗಣ ಹೊಂದಿದ್ದು ಪ್ರಕಾಶ್ ತುಂಬಿನಾಡು, ಮಿತ್ರ ,ಸಾಮ್ರಾಟ್ ಶೆಟ್ಟಿ, ಕಾವ್ಯ ರಮೇಶ್ ,ಶಂಕರ್ ಅಶ್ವಥ್, ರವಿತೇಜ ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಪ್ರಮೋದ್ ಮರವಂತೆ ಹಾಗೂ ಕೆ ಕಲ್ಯಾಣ್ ಅವರು ಸಾಹಿತ್ಯ ರಚಿಸಿದ್ದಾರೆ.
ಚಿತ್ರದ ಪ್ರಮೋಷನ್ ಕಾರ್ಯಗಳು ವೇಗವಾಗಿ ನಡೆಯುತ್ತಿದ್ದು, ಚಿತ್ರ ಇದೆ ಫೆಬ್ರವರಿ 28ಕ್ಕೆ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.