ಸೈನಿಕ ಶಾಲೆ ಪ್ರವೇಶ ಅರ್ಜಿಗೆ ಜ.13 ಕೊನೆಯ ದಿನ

Jan 7, 2025 - 15:07
 0

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ: ವಿಜಯಪುರ ಹಾಗೂ ಕೊಡಗಿನಲ್ಲಿನ ಸೈನಿಕ ಶಾಲೆಯ 6ನೇ ತರಗತಿ ಹಾಗೂ 9ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗಿದೆ. 6ನೇ ತರಗತಿ ರ‍್ಜಿ ಸಲ್ಲಿಸಲು ವಿದ್ಯಾರ್ಥಿಯ ವಯಸ್ಸು 10 ರಿಂದ 12 ರ ಒಳಗೆ ಇರಬೇಕು. ಏ.1 2013 ರಿಂದ ಮಾ. 31 2015ರ ಒಳಗಾಗಿ ಜನಿಸಿರಬೇಕು. 9ನೇ ತರಗತಿಗೆ ಅರ್ಜಿಸಲ್ಲಿಸಲು ವಿದ್ಯಾರ್ಥಿಯ ವಯಸ್ಸು ಏ. 1 2010 ರಿಂದ ಮಾ. 31. 2012ರ ಒಳಗಾಗಿ ಜನಿಸಿರಬೇಕು. 

ಜನವರಿ 13 ಸಂಜೆ 5ಗಂಟೆ ವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜನವರಿ 14ರ ರಾತ್ರಿ 11.50ರ ವರೆಗೆ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ. ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಜ.16 ರಿಂದ 18ರ ವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ರೂ.800 ನಿಗದಿ ಪಡಿಸಲಾಗಿದೆ ಹಾಗೂ ಪ.ಜಾ/ಪ.ಪಂ ದವರಿಗೆ ರೂ. 650 ಶುಲ್ಕ ನಿಗದಿಪಡಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 08352-270638ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.