ಹೆಚ್.ಎಸ್.ಪ್ರತಿಮಾ ಹಾಸನ್ ಗೆ 'ನಿತೋತ್ಸವ ಕನ್ನಡ ಸಿರಿ ' ಪ್ರಶಸ್ತಿ

Jan 5, 2025 - 09:44
 0
ಹೆಚ್.ಎಸ್.ಪ್ರತಿಮಾ ಹಾಸನ್ ಗೆ  'ನಿತೋತ್ಸವ ಕನ್ನಡ ಸಿರಿ ' ಪ್ರಶಸ್ತಿ

ಬೆಂಗಳೂರು: ಇತ್ತೀಚಿಗೆ ನಡೆದ ನಿತೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ )ವತಿಯಿಂದ ಕಲಾಗ್ರಾಮ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಗಿತ್ತು.

 ಹಾಸನದ ' ಪ್ರತಿಮಾ ಸಾಮಾಜಿಕ ಸಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದಂತಹ ಹೆಚ್.ಎಸ್.ಪ್ರತಿಮಾ ಹಾಸನ್ ರವರು, ಶಿಕ್ಷಕರು ಸಮಾಜ ಸೇವಕರು, ಲೇಖಕರು, ಅಂಕಣಗಾರ್ತಿ, ಕವಯತ್ರಿ, ಪತ್ರಕರ್ತರು,ಇವರ ಸಾಹಿತ್ಯ, ಶಿಕ್ಷಣ,ಸಾಮಾಜಿಕ ಸೇವೆ, ಸಾಂಸ್ಕೃತಿಕ ಸೇವೆ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರನ್ನು " ನಿತ್ಯೋತ್ಸವ ಕನ್ನಡ ಸಿರಿ ಪ್ರಶಸ್ತಿ " ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ನಿತ್ಯ , ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿ, ಶ್ರೀಮತಿ ದೀಪಾ ಪ್ರಭಾಕರ್ ಮೈಶಾಳೆರವರು (ಕೆ.ಎ.ಎಸ್) ಇನ್ನೂ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.