ತಿಕೋಟಾ ತಾಲೂಕು ಮಟ್ಟದ ನರೇಗಾ ದಿವಸ್ ಆಚರಣೆ

ತಿಕೋಟಾ: ನರೇಗಾದಡಿ ಮಾನವ ದಿನಗಳ ಸಂಖ್ಯೆ 100 ರಿಂದ 150 ಕ್ಕೆ ಏರಿಸಿ ಎಂದು ಗ್ರಾಪಂ ಸದಸ್ಯ ಸುಭಾಷಗೌಡ ಪಾಟೀಲ ಅವರು ಹೇಳಿದರು.
ತಾಲೂಕಿನ ಬಿಜ್ಜರಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ನರೇಗಾ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರಸ್ತುತ ಗ್ರಾಮೀಣರಿಗೆ ನೀಡುತ್ತಿರುವ 100 ದಿನಗಳ ಬದಲು 150 ದಿನಗಳಿಗೆ ಹೆಚ್ಚಳ ಮಾಡಿ ಗ್ರಾಮೀಣ ಜನರಿಗೆ ಇನ್ನಷ್ಟು ಕೆಲಸ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿ ಮುಂದಾಗಬೇಕು ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಮಾತನಾಡಿ ಮನರೇಅ ಎನ್ನುವುದು ಕೇವಲ ಒಂದು ಯೋಜನೆಯಾಗಿರದೇ ಅದು ಗ್ರಾಮೀಣರ ಪಾಲಿನ ಕಲ್ಪವೃಕ್ಷವಾಗಿದೆ. 100 ದಿನಗಳ ಉದ್ಯೋಗ ಖಾತರಿ ನೀಡುವದಷ್ಟೇ ಅಲ್ಲದೇ ರೈತ್ತರ ಜಮೀನಿನಲ್ಲಿ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ಗ್ರಾಮಾಭಿವೃದ್ಧಿಗಾಗಿ ಸಮುದಾಯ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣರಿಗೆ ವರದಾನವಾಗಿದೆ ಎಂದರು. ಈ ಯೋಜನೆಯಡಿ ಕೆಲಸ ನಿರ್ವಹಿಸುವ ನೀವುಗಳು ಕೇವಲ ನಿಮ್ಮ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸದೇ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೀರಿ. ಆದ್ದರಿಂದ ನಿಮ್ಮ ಗ್ರಾಮದ ಅಭಿವೃದ್ಧಿಯಲ್ಲಿ ನೀವು ಪಾಲುದಾರರಾಗುತ್ತಿದ್ದೀರಿ ಎಂಬ ಹೆಮ್ಮೆ ನಿಮಗೆ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಕ್ಯಾತನ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜೆ.ಎ.ದಶವಂತ, ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜನಾಧಿಕಾರಿ ಕಲ್ಲಪ್ಪ ನಂದರಗಿ, ಸಂಪನ್ಮೂಲ ವ್ಯಕ್ತಿ ರಮೇಶ ಭಜಂತ್ರಿ, ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಾದ ಗೀತಾ ಶೇಗಾವಿ, ಕಾವ್ಯ ಕುಂಬಾರ, ಲಕ್ಷ್ಮಿ ರಾಠೋಡ, ಶೃತಿ ಭಜಂತ್ರಿ, ಗ್ರಾಮ ಪಂಚಾಯತಿಯ ದುಂಡಪ್ಪ ನಾಗರಳ್ಳಿ, ಬಸವರಾಜ ಜೊಲ್ಲಿ, ಗೋಪಾಲ ಕುಂಬಾರ ಸೇರಿದಂತೆ ಇತರರು ಹಾಜರಿದ್ದರು.