"ನಾಗವಲ್ಲಿ ಬಂಗಲೆ" ಪ್ರವೇಶಿಸಿದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪ್ರತಿನಿಧಿಗಳು

Jan 5, 2025 - 23:41
 0
"ನಾಗವಲ್ಲಿ ಬಂಗಲೆ" ಪ್ರವೇಶಿಸಿದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪ್ರತಿನಿಧಿಗಳು

ಕನ್ನಡದಲ್ಲಿ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ.  ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು "ನಾಗವಲ್ಲಿ ಬಂಗಲೆ" ನಿರ್ಮಾಣವಾಗಿದೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಹುಡುಗಿಯರು(ಪಾತ್ರಗಳು) "ನಾಗವಲ್ಲಿ ಬಂಗಲೆ"ಯನ್ನು ಪ್ರವೇಶಿಸುತ್ತಾರೆ. ಈ ಆರು ಪಾತ್ರಗಳ ಜೊತೆಗೆ ಮತ್ತೊಂದು ವಿಶೇಷ ಪಾತ್ರ ಸಹ ಇದೆ. ಈ ಆರು ಪಾತ್ರಗಳ ಪ್ರವೇಶದ ನಂತರ "ನಾಗವಲ್ಲಿ ಬಂಗಲೆ"ಯಲ್ಲಿ ಏನೆಲ್ಲಾ ಆಗುತ್ತದೆ. ಎಂಬುದೆ ಚಿತ್ರದ ಪ್ರಮುಖ ಕಥಾಹಂದರ.

 ಈಗಾಗಲೇ ಚಿತ್ರೀಕರಣ ಮುಗಿಸಿರುವ "ನಾಗವಲ್ಲಿ ಬಂಗಲೆ"ಯನ್ನು ಸೆನ್ಸಾರ್ ಮಂಡಳಿ ಕೂಡ ವೀಕ್ಷಿಸುದ್ದು,  'U/A' ಪ್ರಮಾಣ ಪತ್ರವನ್ನು ನೀಡಿದೆ. ಬೆಂಗಳೂರು, ನೆಲಮಂಗಲದ ಆಸುಪಾಸಿನಲ್ಲಿ ಚಿತ್ರೀಕರಣವಾಗಿದೆ. 

 ಈ ಚಿತ್ರವು ಹಂಸ ವಿಷನ್ಸ್ ಲಾಂಛನದಲ್ಲಿ ನೆಲ ಮಹೇಶ್ ಮತ್ತು ನೇವಿ ಮಂಜು ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿ ರಾಜೇಶ ರವರ ನಿರ್ದೇಶನ, ರೋಹನ್ ದೇಸಾಯಿರವರ ಸಂಗೀತ, ಜೆ. ಎಮ್. ಪ್ರಹ್ಲಾದ್ ರವರ ಕಥೆ -ಚಿತ್ರಕಥೆ-ಸಂಭಾಷಣೆ ಈ ಚಿತ್ರಕ್ಕಿದೆ. ಫೆಬ್ರುವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲು ಅಣಿಯಾಗುತ್ತಿರುವ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನೆ.ಲ.ನರೇಂದ್ರಬಾಬು,‌ ತೇಜಸ್ವಿನಿ, ನೇವಿ ಮಂಜು, ರೂಪಶ್ರೀ ಮುಂತಾದವರಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.