ಜಂಟಿ ಸರ್ವೆಗೆ ಶಾಸಕ ನಾಡಗೌಡ ಸೂಚನೆ

Oct 5, 2024 - 20:44
 0
ಜಂಟಿ ಸರ್ವೆಗೆ ಶಾಸಕ ನಾಡಗೌಡ ಸೂಚನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಮುದ್ದೇಬಿಹಾಳ : ಪಟ್ಟಣದ ಇಂದಿರಾ ನಗರದಲ್ಲಿ ಸ್ಲಂಬೋರ್ಡ ನಿಂದ ಕೊಟ್ಟಿರುವ ಹಕ್ಕುಪತ್ರಗಳನ್ನು ಪಡೆದುಕೊಂಡಿರುವ ನಿವಾಸಿಗಳ ಬಗ್ಗೆ ಹಾಗೂ ದೊಡ್ಡ ಕೆರೆ,ಸಣ್ಣ ಕೆರೆಯ ಅಭಿವೃದ್ಧಿ ವಿಷಯವಾಗಿ ಇಲ್ಲಿನ ಪುರಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಮಧ್ಯೆಯೇ ಕಾವೇರಿದ ಚರ್ಚೆ ನಡೆಯಿತು.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅತಿಕ್ರಮಣ ತೆರವು ವಿಚಾರ ಪ್ರಸ್ತಾಪವಾದಾಗ ಇಂದಿರಾ ನಗರದಲ್ಲಿರುವ ಕಡಿ ಮಷಿನ್ ಹತ್ತಿರ ಶೆಡ್ ಹಾಕಿಕೊಂಡು, ಮನೆಕಟ್ಟಿಕೊಂಡು ಇರುವವರಿಗೆ ಸ್ಲಂಬೋರ್ಡ್ನಿAದ ಹಕ್ಕುಪತ್ರಗಳನ್ನು ಕೊಡಲಾಗಿದ್ದು ಅವುಗಳಲ್ಲಿ ಸ್ಥಳೀಯ ನಿವಾಸಿಗಳಲ್ಲದವರಿಗೆ ವಾಸಿಸಲು ಹಣ ಪಡೆದುಕೊಂಡು ಅನಧಿಕೃತವಾಗಿ ಹಕ್ಕುಪತ್ರ ನೀಡಲಾಗಿದೆ ಎಂದು ಕೆಲ ಸದಸ್ಯರು ಆರೋಪಿಸಿದರು.

ಇದಕ್ಕೆ ಮಧ್ಯೆಪ್ರವೇಶಿಸಿದ ಸದಸ್ಯರೊಬ್ಬರು, ಸ್ಲಂಬೋರ್ಡ್ನಿAದ ಹಕ್ಕುಪತ್ರ ಕೊಡಲಾಗಿದೆ.ಅಲ್ಲಿ ಬಡವರು ವಾಸಿಸುತ್ತಿದ್ದಾರೆ.ಅನಧಿಕೃತ ಎಂದು ಕಂಡು ಬಂದವರನ್ನು ಪುರಸಭೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಜಂಟಿ ಸರ್ವೆ ನಡೆಸಿ ಪತ್ತೆ ಹಚ್ಚಿ ಮುಂದಿನ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸ್ಲಂಬೋರ್ಡ್ ಅಧಿಕಾರಿಗಳು, ಹಕ್ಕುಪತ್ರಗಳನ್ನು ಕೊಟ್ಟಿದ್ದು ಅಲ್ಲಿ ವಾಸಿಸುತ್ತಿರುವವರು ಸ್ಥಳೀಯರೇ ಅಲ್ಲವೇ ಎಂಬುದನ್ನು ಪುರಸಭೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಅನಧಿಕೃತವೆಂದು ಕಂಡು ಬಂದವರ ಹಕ್ಕುಪತ್ರಗಳನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದರು.

ಪಟ್ಟಣದ ಕೆರೆಯ ಅಭಿವೃದ್ಧಿ ವಿಷಯ ಪ್ರಸ್ತಾಪವಾದಾಗ ಸದಸ್ಯ ವೀರೇಶ ಹಡಲಗೇರಿ, ಶಿವಪ್ಪ ಶಿವಪೂರ ಮೊದಲಾದವರು, ಕೆರೆಯ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು.ಈಗಾಗಲೇ ಪುಟ್‌ಪಾತ್ ಇದ್ದು ಅಭಿವೃದ್ಧಿ ವಿಷಯದಲ್ಲಿ ಯಾರದ್ದೆ ಮರ್ಜಿ ಕಾಯಬೇಡಿ ಎಂದು ತಿಳಿಸಿದರು.

ಅಂತಿಮವಾಗಿ ಅಧಿಕಾರಿಗಳೊಂದಿಗೆ ಸದಸ್ಯರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಐದು ಕೋಟಿ ರೂ.ಪ್ರಸ್ತಾವನೆ ಕೆರೆ ಅಭಿವೃದ್ಧಿಗೆ ಸಲ್ಲಿಸಲಾಗಿದೆ ಎಂದರು.ಇನ್ನುಳಿದAತೆ ಯುಜಿಡಿ ಮುಂದುವರೆದ ಕಾಮಗಾರಿ ಕೈಗೊಳ್ಳಲು ೩೪.೪೦ ಕೋಟಿ ರೂ. ಅನುದಾನ ಕೆ.ಯು.ಆರ್.ಡಿ.ಎಫ್.ಸಿ ಯೋಜನೆ ಅಡಿ ಬಂದಿದೆ.ಹೊಸ ಕಾಮಗಾರಿ ಕೈಗೊಳ್ಳಲು ಸದಸ್ಯರ ವಿಶ್ವಾಸದೊಂದಿಗೆ ಸರ್ವೆ ಮಾಡಿಸಲಾಗುತ್ತದೆ ಎಂದರು.ಪ್ರಧಾನಮAತ್ರಿ ಆವಾಸ್ ಯೋಜನೆಯಡಿ ಅರ್ಹರಲ್ಲವದರಿಗೆ ಮನೆ ಹಂಚಿಕೆ ಮಾಡಲಾಗಿದ್ದು ಅದನ್ನು ರದ್ದುಗೊಳಿಸಬೇಕು ಎಂದು ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳರ ಆಗ್ರಹಿಸಿದರು.

 ಕುಡಿವ ನೀರು, ಚರಂಡಿ ಸಮಸ್ಯೆ, ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು.

ಖಾಸಗಿ ಹೊಟೇಲ್‌ಗಳಿಗೆ ಕೊಟ್ಟಿರುವ ನೀರಿನ ನಳದ ಸಂಪರ್ಕಗಳಿಗೆ ಮೀಟರ್ ಅಳವಡಿಸಬೇಕು.ದೇವೂರು ಜಾಕವೆಲ್‌ನ ಎಕ್ಸಪ್ರೆಸ್ ಫೀಡರ್ ಲೈನ್ ಮೇಲೆ ಬೇರೆ ಸಂಪರ್ಕ ಕೊಡಬೇಡಿ.ಅಂತಹ ಅನಧಿಕೃತ ಲೈನ್ ಕೊಟ್ಟಿದ್ದಲ್ಲಿ ಸಂಪರ್ಕ ಸ್ಥಗಿತಗೊಳಿಸಿ ಎಂದು ಶಾಸಕರು ಸೂಚಿಸಿದರು.ಸಭೆಯಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ,ಸದಸ್ಯರು,ನಾಮನಿರ್ದೇಶಿತ ಸದಸ್ಯರು ಇದ್ದರು.ಆಶ್ರಯ ಕಮೀಟಿಗೆ ನಾಮನಿರ್ದೇಶಿತರಾದ ಸದಸ್ಯರನ್ನು ಸನ್ಮಾನಿಸಲಾಯಿತು.

---

ಸ್ಲಂಬೋರ್ಡ್ ನಿವಾಸಿಗಳ ಮನವಿ: ಸ್ಲಂಬೋರ್ಡ್ನಿAದ ಹಕ್ಕುಪತ್ರ ನೀಡಿದ್ದು ತಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ.ಬಡವರಾದ ನಮಗೆ ವಾಸಿಸಲು ಸೂರು ಇಲ್ಲ.ಇದ್ದವರನ್ನು ಒಕ್ಕಲೆಬ್ಬಿಸಬೇಡಿ ಎಂದು ಹಲವರು ಪುರಸಭೆ ಬಳಿ ಶಾಸಕರನ್ನು ಭೇಟಿಯಾಗಿ ಮನವಿ ಮಾಡಿಕೊಂಡರು.ಪಿಎಸ್‌ಐ ಸಂಜಯ ತಿಪರೆಡ್ಡಿ ಹಾಗೂ ಎಎಸ್‌ಐ,ಪೊಲೀಸ್‌ರು ಭದ್ರತೆ ಒದಗಿಸಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.