ನಾಡದೇವಿ ಮೂರ್ತಿ ಅದ್ದೂರಿ ಮೆರವಣಿಗೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಮುದ್ದೇಬಿಹಾಳ : ಪಟ್ಟಣದಲ್ಲಿ ಒಂಭತ್ತು ದಿನಗಳ ಕಾಲ ನಾಡದೇವಿ ಪ್ರತಿಷ್ಠಾಪನೆಯ ನಿಮಿತ್ಯ ಮೂರ್ತಿ ಮೆರವಣಿಗೆಗೆ ಗುರುವಾರ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ,ನಗರದ ಮುಖಂಡ ಬಸನಗೌಡ ಪಾಟೀಲ್ ಚಾಲನೆ ನೀಡಿದರು.
ಪಟ್ಟಣದ ಎಂಟು ಗಡಗಡೆ ಬಾವಿಯಿಂದ ಆರಂಭಗೊAಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಬಜಾರ್‌ದ ದ್ಯಾಮವ್ವನ ಕಟ್ಟೆಯ ಮೇಲೆ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಮುಖಂಡರಾದ ಅಶೋಕ ನಾಡಗೌಡ, ವಿಕ್ರಂ ಓಸ್ವಾಲ್,ಸಂಗು ನಾಯ್ಕೋಡಿ,ಕರ್ನಾಟಕ ಬ್ಯಾಂಕ್ ನಿರ್ದೇಶಕ ಪ್ರಭುರಾಜ ಕಲಬುರ್ಗಿ, ಗುರುಲಿಂಗಪ್ಪ ಪಾಟೀಲ್, ಅಪ್ಪಣ್ಣ ಸಿದ್ದಾಪುರ,ಪುರಸಭೆ ಸದಸ್ಯರಾದ ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ ,ಭಾರತಿ ಪಾಟೀಲ್, ಪಟೇಲ್ ಜನಾಂಗದವರು ಇದ್ದರು.