ಗಾಂಧೀಜಿಯವರ ಬಗ್ಗೆ ಯುವ ಜನಾಂಗ ಅಧ್ಯಯನ ಮಾಡಬೇಕು

Oct 4, 2024 - 18:11
 0
ಗಾಂಧೀಜಿಯವರ ಬಗ್ಗೆ ಯುವ ಜನಾಂಗ ಅಧ್ಯಯನ ಮಾಡಬೇಕು
ಮುದ್ದೇಬಿಹಾಳ ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಬಿ.ಬಿ.ಆರ್ ಹಾರ್ವರ್ಡ್ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಪ್ರಬಂಧ ಸ್ಪರ್ಧೆಯಲ್ಲಿ ಬುಧವಾರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 


ಮುದ್ದೇಬಿಹಾಳ ;  ಗಾಂಧೀಜಿಯವರ ಬಗ್ಗೆ ಯುವ ಜನಾಂಗ ಅಧ್ಯಯನ ಮಾಡಬೇಕು.ಕಮ್ಯೂನಿಸ್ಟ್ ರಾಷ್ಟ್ರದಲ್ಲೂ ಗಾಂಧೀಜಿ ಪ್ರತಿಮೆ ಇದೆ.ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತಿದೆ ಎಂದು ಬಿಬಿಆರ್ ಹಾರ್ವರ್ಡ ಕಾಲೇಜಿನ ಅಧ್ಯಕ್ಷ ಎಸ್.ಎಂ.ನೆರಬೆAಚಿ ಹೇಳಿದರು.
ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಬಿ.ಬಿ.ಆರ್ ಹಾರ್ವರ್ಡ್ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಪ್ರಬಂಧ ಸ್ಪರ್ಧೆಯಲ್ಲಿ ಬುಧವಾರ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನೆಮ್ಮದಿ ಜೀವನ ನಾವೆಲ್ಲ ನಡೆಸಿದ್ದೇವೆ.ವಿದೇಶಕ್ಕೆ ಹೋಗಿ ಇಂಗ್ಲಿಷ್,ಪರ್ಷಿಯನ್ ಭಾಷೆಗಳಲ್ಲಿ ಓದಿದವರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದರು.೫೬೫ ಪ್ರಾಂತಗಳಲ್ಲಿ ವಿಂಗಡಣೆಯಾದ ಭಾರತವನ್ನು ಒಂದುಗೂಡಿಸಿ ಸ್ವಾತಂತ್ರ‍್ಯ ಗೊಳಿಸಲು ಹಲವಾರು ಹೋರಾಟಗಾರರು ಬಲಿದಾನಗೈದಿದ್ದಾರೆ ಎಂದರು.


ಎA.ಜಿ.ಎA.ಕೆ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ ಮಾತನಾಡಿ, ಗಾಂಧೀಜಿ ಒಬ್ಬ ವ್ಕಕ್ತಿಯಲ್ಲ ಈ ದೇಶದ ಶಕ್ತಿ.ಅವರ ಬಗ್ಗೆ ಹಲವರು ವ್ಯಂಗ್ಯಭರಿತವಾಗಿ ಮಾತನಾಡುತ್ತಿರುವುದು ಸರಿಯಲ್ಲ.ಸರಳತೆಯೊಂದಿಗೆ ಅಹಿಂಸೆಯ ಮೂಲಕವೇ ಸ್ವಾತಂತ್ರö್ಯ ತಂದುಕೊಟ್ಟ ಧೀಮಂತ ನಾಯಕರು ಗಾಂಧೀಜಿ ಎಂದರು.


ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವಕೀಲರ ಸಂಘದ ಕಾರ್ಯದರ್ಶಿ  ಪಿ.ಬಿ.ಗೌಡರ ಮಾತನಾಡಿದರು.ವಕೀಲರಾದ ಮಹಾಂತಗೌಡ ಬಿರಾದಾರ,ಪ್ರಾರ್ಚಾರ್ಯೆ ಆರ್.ಬಿ.ರೂಡಗಿ ಇದ್ದರು.ವಿಠ್ಠಲ ಕುರಿ ನಿರೂಪಿಸಿದರು.
ತಾಲ್ಲೂಕುಮಟ್ಟದ ಪ್ರೌಢಶಾಲೆಗಳ ಪ್ರಬಂಧ ಸ್ಪರ್ಧೆಯಲ್ಲಿ ಜ್ಞಾನ ಭಾರತಿ ಶಾಲೆಯ ಪ್ರಜ್ವಲ ಹರಿಂದ್ರಾಳ ಪ್ರಥಮ,ಶಾರದಾ ಪ್ರೌಢಶಾಲೆಯ ಅನನ್ಯಾ ಲಮಾಣಿ ದ್ವಿತೀಯ, ಸರ್ಕಾರಿ ಪ್ರೌಢಶಾಲೆಯ ರಾಜೇಶ್ವರಿ ಮಾದರ ತೃತೀಯ ಸ್ಥಾನ ಪಡೆದುಕೊಂಡರು. ಕಾಲೇಜು ಹಂತದಲ್ಲಿ ಪಪೂ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಶ್ವೇತಾ ನಾಲತವಾಡ ಪ್ರಥಮ,ನಂದಿತಾ ಪಾಟೀಲ್ ದ್ವಿತೀಯ, ಭಾಗ್ಯಾ ಹರಿಂದ್ರಾಳ ತೃತೀಯ ಸ್ಥಾನ ಪಡೆದುಕೊಂಡರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.