ಅಭ್ಯುದಯ ಕಾಲೇಜಿನಿಂದ ಪಾರದರ್ಶಕ ಪರೀಕ್ಷೆ : ಎಂ.ಎನ್.ಮದರಿ

ಮುದ್ದೇಬಿಹಾಳ : ನಾವು ಲಾಭ ಮಾಡಿಕೊಳ್ಳುವುದಕ್ಕೋಸ್ಕರ ಶಿಕ್ಷಣ ಸಂಸ್ಥೆ ಕಟ್ಟಿಲ್ಲ. ಬಡವರ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ದೊರೆಯಬೇಕು ಎಂಬುದು ನನ್ನ ಕನಸಾಗಿದ್ದು ನಮ್ಮ ಶಿಕ್ಷಣ ಸಂಸ್ಥೆಯಿAದ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡಿದ್ದ ಹೋಳ್ಕರ್ ಸ್ಕಾಲರಶಿಪ್ ಎಕ್ಸಾಂ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆಯವರು ನಡೆಸುವಂತೆ ನಮ್ಮಲ್ಲಿ ಪರೀಕ್ಷೆ ಇರುವುದಿಲ್ಲ. ನಮ್ಮ ಸಂಸ್ಥೆಯಲ್ಲಿ ಜಾತ್ಯಾತೀತವಾಗಿ ಶಿಕ್ಷಣ ನೀಡುತ್ತಿದ್ದೇವೆ.ಇಪ್ಪತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ.53 ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.25 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ ಮಾತನಾಡಿ, ತಾಲ್ಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ಎಂ.ಎನ್.ಮದರಿ ಅವರ ಕಾರ್ಯದಿಂದ ಬಡವರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಸAಸ್ಥೆಯ ನಿರ್ದೇಶಕಿ ಶ್ರೀದೇವಿ ಮದರಿ,ನಿರ್ದೇಶಕ ಕಿರಣ ಮದರಿ, ಸಲಹಾ ಸಮಿತಿ ಸದಸ್ಯ ರವಿ ಜಗಲಿ,ವ್ಯವಸ್ಥಾಪಕ ಬಸವರಾಜ ಬಿಜ್ಜೂರ, ಪಿಯು ಕಾಲೇಜು ಪ್ರಾಚಾರ್ಯ ಎಂ.ಎA. ಧನ್ನೂರ, ಪದವಿ ಕಾಲೇಜು ಪ್ರಾಚಾರ್ಯ ಆರ್.ಎಸ್.ಜಡಗಿ, ಮುಖ್ಯಗುರುಗಳಾದ ಎಚ್.ಬಿ.ಜಾಯವಾಡಗಿ, ರಮೇಶ ಹರನಾಳ, ಭೀಮಣ್ಣ ಪೂಜಾರಿ, ಉಪನ್ಯಾಸಕ ವೀರೇಶ ಹುಲಿಕೇರಿ, ಗೀತಾ ಹುರಕಡ್ಲಿ,ಬಸವರಾಜ ಗೂಡಲಮನಿ ಇದ್ದರು.
ಟಾಪ್20 ವಿದ್ಯಾರ್ಥಿಗಳು: ಎಂ.ಡಿ ಝಿಹಾನ್, ಜೀವನ ಹುಡೇದ,ರೋಹಿತ ಕುಂಬಾರ, ಸಾಗರ ಪಡೇಕನೂರ, ರಶ್ಮಿ ನಾಡಗೌಡ,ಗಗನಸಿಂಗ ಮೂಲಿಮನಿ, ಪುಷ್ಪಾ ಕಟ್ಟೀಮನಿ, ಭೂಮಿಕಾ ಪಾಟೀಲ, ಭಾಗ್ಯಶ್ರೀ ಪೊಲೀಸಪಾಟೀಲ, ರಾಜೇಶ್ವರಿ ಅಸ್ಕಿ, ಸೋಮಶೇಖ ನಿಡಗುಂದಿ, ಸುಚಿತ ಮಾಕೊಂಡ,ವೀರೇಶ ಬಿರಾದಾರ, ವಸಂತಗೌಡ ಬಂಗಾರಗುAಡ, ದಾವಲಸಾ ಅತ್ತಾರ,ಸಹನಾ ಬುಡ್ಡರ, ಲೋಹಿತ ಹಿರೇಮಠ, ಮೌನೇಶ ಬಡಿಗೇರ, ಬಸವಪ್ರಭು , ಪ್ರಿಯಾ ಆರ್ ಹೋಳ್ಕರ್ ಸ್ಕಾಲರಶಿಪ್‌ಗೆ ಆಯ್ಕೆಯಾದರು.