ಶಾಲೆಗಳ ಅಭಿವೃದ್ಧಿಗೆ ಸಮುದಾಯ ಕೈ ಜೋಡಿಸಲಿ : ನಿವೃತ್ತ ಉಪ ನಿರ್ದೇಶಕ ಎಸ್.ಡಿ.ಗಾಂಜಿ

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಆ ಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಬೆಳಗಾವಿ ಡಯಟ್ ನಿವೃತ್ತ ಉಪ ನಿರ್ದೇಶಕ ಎಸ್.ಡಿ.ಗಾಂಜಿ ಹೇಳಿದರು.
ತಾಲ್ಲೂಕು ಚಿರ್ಚನಕಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾ ಕಲೋತ್ಸವ ಹಾಗೂ ಶಾಲಾ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲೆಗಳಿಗೆ ದಾನ ಮಾಡಿದರೆ ಅಲ್ಲಿನ ಸೌಲಭ್ಯ ಸುಧಾರಿಸಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಕರಿಗೆ ಸಹಕಾರಿಯಾಗುತ್ತಿದ್ದು ಎಲ್ಲೋ ವ್ಯರ್ಥವಾಗಿ ಹಣ ಪೋಲು ಮಾಡದೇ ನೀವು ಕಲಿತ ಶಾಲೆಗಳಿಗೆ ಒಮ್ಮೆ ಹೋಗಿ ಬನ್ನಿ ಎಂದು ಹೇಳಿದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಬೇಕು ಎಂದು ಹೇಳಿದರು.
ತಾಪಂ ಇಒ ಎನ್.ಎಸ್.ಮಸಳಿ, ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ತುರಡಗಿ, ಸಿಆರ್‌ಪಿ ಗುರು ಇಬ್ರಾಹಿಂಪೂರ,ಗ್ರಾಪA ಸದಸ್ಯ ಸುರೇಶ ಚೌಧರಿ ,ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ಪ ಮೇಟಿ, ಶಿಕ್ಷಕ ಟಿ.ಡಿ.ಲಮಾಣಿ ಮಾತನಾಡಿದರು.
ಭೂದಾನಿ ಯಲ್ಲನಗೌಡ ಪಾಟೀಲ್, ಉಮಾಪತಿ ಚೌಧರಿ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಗುರಿಕಾರ, ಭೀಮಪ್ಪ ಮೇಟಿ, ಭೀಮನಗೌಡ ಪಾಟೀಲ್, ಗ್ರಾಪಂ ಸದಸ್ಯೆ ಸುಮಿತ್ರಾ ಪಾಟೀಲ,ಮುಖ್ಯಗುರು ಆಯ್.ಎಂ.ಕಲ್ಲೂರ, ಪಿಡಿಒ ವಿಜಯಾ ಮುದಗಲ್, ರಾಮನಗೌಡ ಪಾಟೀಲ,ಮಲೀಕಸಾಬ ನದಾಫ, ಕೆ.ಎಚ್.ಚವ್ಹಾಣ, ಎನ್.ಎಸ್.ಕುಂಬಾರ ಇದ್ದರು. ಕಾರ್ಯಕ್ರಮದಲ್ಲಿ ಶಾಲೆಗೆ ವಿವಿಧ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು