"ಮೋಹದ ಮಳೆ" ಮತ್ತು "ನಾ ಕಾಯುವೆ" ಆಲ್ಬಮ್ ಸಾಂಗ್ ಬಿಡುಗಡೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕನ್ನಡದಲ್ಲಿ ಹೊಸ ಆಲ್ಬಮ್ ಸಾಂಗ ಗಳು ಸದ್ಯದ ಮಟ್ಟಿಗೆ ಸದ್ದು ಮಾಡುತ್ತಿದ್ದು ಅಂತದರ ಪೈಕಿ "ಮೋಹದ ಮಳೆ" ಮತ್ತು "ನಾ ಕಾಯುವೆ" ಎಂಬ ನೂತನ ಆಲ್ಬಮ್ ಸಾಂಗ್ ಸೇರ್ಪಡೆಗೊಂಡಿದೆ . ಸೋಶಿಯಲ್ ಮೀಡಿಯಾಗಳಲ್ಲಿ ಗುರುತಿಸಿಕೊಂಡ ಯುವ ಪ್ರತಿಭೆಗಳು ನಟಿಸಿದ್ದು ಎಲ್ಲರ ಗಮನ ಸೆಳೆದಿದ್ದಾರೆ.
ರೇಣುಕಾಂಬ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮತ್ತು ಅಭಿಮಾನಿಗಳ ಮುಂದೆ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು.
ಉತ್ತರ ಕರ್ನಾಟಕದ ಹೊಸ ಪ್ರತಿಭೆ "ರೂಪಾ ರಾಶ್ಟಿ" ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು ಮತ್ತು ಇನ್ನೊಂದು ಹಾಡಿಗೆ ಸಾಹಿತ್ಯ ಬರೆದು ಎರಡು ಕ್ಷೇತ್ರಗಳಲ್ಲಿ ತನ್ನದೇ ಆದ ಪ್ರತಿಭೆಯನ್ನು ತೋರಿಸಿಕೊಂಡಿದ್ದಾರೆ. ಮೋಹದ ಮಳೆ ಹಾಡಿಗೆ ನಿರ್ದೇಶನ ಮಾಡಿದ್ದು ನಾ ಕಾಯುವೆ ಹಾಡಿಗೆ ಸಾಹಿತ್ಯ ಬರೆದಿರುತ್ತಾರೆ, ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ ಮತ್ತು ಇನ್ನೂ ಹಲವು ಚಿತ್ರಗಳಿಗೆ ಕಥೆ ಮತ್ತು ಸಾಹಿತ್ಯ ಬರೆಯುವ ಕೆಲಸ ಮಡುತ್ತಿರುವ ಜೊತೆಗೆ ಕೆಲವೊಂದು ಚಿತ್ರಗಳಲ್ಲಿ ಅಭಿನಯ ಕೂಡಾ ಮಾಡುತ್ತಿದ್ದಾರೆ. ಕನ್ನಡಕ್ಕೊಂದು ಬಹುಮುಖ ಪ್ರತಿಭೆ ಸಿಕ್ಕಾಗೆ ಅಗಿದೆ.
ಎರಡು ಹಾಡುಗಳನ್ನು ಜೋಶ್ನಾ ಫಿಲಂ ಪ್ರೊಡಕ್ಷನ್ ಮಾಲಿಕರಾದಂತಹ ಜಾನ್ ಜಿಂಕುಟಿ ಅವರು ನಿರ್ಮಾಣ ಮಾಡಿದ್ದು ಮುಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದಾರೆ ಮೂಲತ ಆಂಧ್ರ ದವರಾದ ಜಾನ್ ಜಿಂಕುಟಿ ಅವರು ಕನ್ನಡ ಚಲನಚಿತ್ರ ನಿರ್ಮಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಹೆಮ್ಮೆಯ ವಿಷಯ ಹಾಗೂ ಹಲವು ಕನ್ನಡ ಕಲಾವಿದರಿಗೆ ಅವಕಾಶಗಳನ್ನು ಮಾಡಿಕೊಡುತ್ತಿದ್ದಾರೆ.
ನಾ ಕಾಯುವೆ ಹಾಡಿಗೆ ನಾಯಕ ನಟನಾಗಿ ರಾಕ್ ಸ್ಟಾರ್ ರೋಹನ್ ಅವರು ಮತ್ತು ನಾಯಕಿಯರಾಗಿ ಸ್ನೇಹಾ ಮತ್ತು ರಿತು ಗೌಡ ಅವರು ಅಭಿನಯಿಸಿರುತ್ತಾರೆ .
ಇದರ ನಿರ್ದೇಶನ ಮಾಡಿದ್ದು ಕಿರಣ್ ಗಜ ಅವರು ಹಾಗೂ ಕ್ರಿಯೇಟಿವ್ ಹೆಡ್ ಆಗಿ ನವೀನ್ ಜಿ ಪಿ ಅವರು ಕಾರ್ಯನಿರ್ವಹಿಸಿದ್ದರು. ಮನೀಶ್ ಕುಲಾಲ್ ಅವರು ಉತ್ತಮ ಸಂಕಲನ ಮಾಡಿದ್ದಾರೆ. ಈ ಹಾಡಿಗೆ ಜಾನ್ ಕೆನ್ನಡಿಯವರು ಅದ್ಬುತ ಸಂಗೀತ ಸಂಯೋಜನೆ ಮಾಡಿದ್ದಾರೆ. ರೇಣುಕಾ ಅಜಯ್ ಅವರ ಧ್ವನಿಯಲ್ಲಿ ಮೂಡಿಬಂದಿದೆ.
ಎರಡನೆಯ ಹಾಡು ಮೋಹದ ಮಳೆ ರೂಪಾ ರಾಶ್ಟಿ ಅವರ ನಿರ್ದೇಶನದಲ್ಲಿ ಬಂದ ಈ ಹಾಡಿಗೆ ನಾಯಕರಾಗಿ ಸನ್ಮಿತ್ ನಾಯಕಿಯಾಗಿ ಜಯಶ್ರೀ ಅಭಿನಯಿಸಿದ್ದಾರೆ. ಛಾಯಾಗ್ರಹವನ್ನು ಕಿರಣ ಗಜಾ ಅವರು ಮತ್ತು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರಾಗಿ ಆಕೃತಿ ಯವರು ಕಾರ್ಯನಿರ್ವಹಿಸಿದ್ದಾರೆ. ಈ ಎರಡು ಹಾಡುಗಳನ್ನು ನಿರ್ಮಾಣ ನಿರ್ವಹಣೆ ಮತ್ತು ಪ್ರಚಾರದಲ್ಲಿ ಡಿಎಸ್‌ಕೆ ಸಿಮ್ಮಾನ್ಸ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಸುನಿಲ್ ಕುಂಬಾರ ಅವರು ಸಹಕರಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉದ್ಯಮಿ ಮತ್ತು ಚಲನಚಿತ್ರದ ನಿರ್ಮಾಪಕರಾದ ಡಾ ಸಾಯಿ ಸತೀಶ್ ತೋಟಯ್ಯ. ನಟ ಮತ್ತು ನಿರ್ಮಾಪಕರಾದ ಕೊಡೆ ಮುರುಗಾ. ನಿರ್ಮಾಪಕರು ಮತ್ತು ಡಿಸ್ಟ್ರಿಬ್ಯೂಟರ್ ಆದ ಡಾ. ಸುನೀಲ್ ಕುಂಬಾರ,
ಚಲನಚಿತ್ರ ನಿರ್ಮಾಪಕೀ ಮತ್ತು ನಟಿ ಸುನಂದ ಕಲ್ಬುರ್ಗಿ. ನಟರಾದ ಚೇತನ್ ಕುಮಾರ ಮತ್ತು ಶಂಕರ್ ಬಾಲಗೊಂಡ ರಾಜ್ಯ ಉಸ್ತುವಾರಿ ಅಖಿಲ ಭಾರತ ಕಿಸಾನ್ ಜನತಾ ಪಕ್ಷ ಇವರ ಎಲ್ಲರೂ ಭಾಗವಹಿಸಿದ್ದರು.