ಮಗ್ಗಿ ಪುಸ್ತಕದಲ್ಲಿ ಗೌರಿ ನಟನೆ

ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಪ್ರತಿಭಾವಂತ ನಟಿ ಗೌರಿ ಕೆ 'ಮಗ್ಗಿ ಪುಸ್ತಕ" ಎನ್ನುವ ಹೊಸ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಹರಿವರಾಸನಂ ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ಬಿಡುಗಡೆಯಾಗಲಿದೆ.
ಕಾದಂಬರಿ ಆಧಾರಿತ ಚಿತ್ರಗಳು ಬರುವುದು ಕಡಿಮೆ ಆಗುವ ಸಂದರ್ಭದಲ್ಲಿ ನಿರ್ದೇಶಕ ಹರಿವರಾಸನಂ ಹೊಸ ಹೆಜ್ಜೆ ಇಟ್ಟಿದ್ದಾರೆ. ಎಚ್ ಸಿ ಹರೀಶ ಅವರ "ಅವನಿ" ಕಾದಂಬರಿ ಆಧಾರಿತ ಚಿತ್ರ ಮಗ್ಗಿ ಪುಸ್ತಕ.
ರಂಗಾಯಣ ರಘು, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಮೈಸೂರು, ಮಂಗಳೂರು, ಎಚ್ ಡಿ ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿನ್ನಸ್ವಾಮಿ ಫೀಲಂಸ್ ಸಂಸ್ಥೆಯಲ್ಲಿ ಚಿನ್ನಸ್ವಾಮಿ ಯತಿರಾಜ್ ಚಿತ್ರ ನಿರ್ಮಿಸಿದ್ದಾರೆ. ಸಾಮಾಜಿಕ ಸಂದೇಶ ಸಾರುವ ಚಿತ್ರ ಇದಾಗಿದೆ.
ನಂದಕುಮಾರ್ ಅವರ ಛಾಯಾಗ್ರಹಣ, ಯಶಸ್ ಸಂಗೀತದಲ್ಲಿ "ಮಗ್ಗಿ ಪುಸ್ತಕ" ಮೂಡಿಬಂದಿದೆ.