“ಮಾಡಿದಷ್ಟು ನೀಡು ಭಿಕ್ಷೆ” ಧ್ವನಿ ಸುರುಳಿಯ ಪೋಸ್ಟರ್ ಬಿಡುಗಡೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರ : ಶ್ರೀ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಕುರಿತಾದ “ಮಾಡಿದಷ್ಟು ನೀಡು ಭಿಕ್ಷೆ” ಎನ್ನುವ ಧ್ವನಿ ಸುರುಳಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. .
ಎಂ ಸಿ ಬಸವರಾಜ್ ಭಕ್ತಿ ಪೂರ್ವಕವಾದ ಅಭಿನಯದ ಈ ಗೀತೆಗೆ ಮಂಜು ಕವಿ ಸಂಗೀತ ಒದಗಿಸಿ ಸಾಹಿತ್ಯ ಬರೆದು ನಿರ್ದೇಶನ ಮಾಡಲಿದ್ದಾರೆ. ಸಂಕಲನ ವೆಂಕಿ ಯುಡಿಐ ಹಾಗೂ ಈ ಗೀತೆಯ ವಾದ್ಯ ಸಂಯೋಜನೆ. ಸಂಗೀತ ನಿರ್ದೇಶಕ ವಿನು ಮನಸು ,ಕವಿ ರಾಜೇಶ್ ರವರು ಅಭಿನಂದನೆ ಸಲ್ಲಿಸಿ ತಂಡಕ್ಕೆ ಶುಭ ಹಾರೈಸಿದರು. ಮಲೆಯ ಮಹದೇಶ್ವರ ಸ್ವಾಮಿಯ ದೇವಸ್ಥಾನದ ಅರ್ಚಕರಾದ ದಿನೇಶ್ ಕುಮಾರ್ ಉಪಸ್ಥಿತರಿದ್ದರು . ಎಮ್ ಸಿ ಬಸವರಾಜ್ ರವರ ತುಂಬಾ ದಿನದ ಕನಸು ಇದೀಗ ನನಸಾಗಿದೆ ಶನಿಮಹಾತ್ಮ ದೇವಸ್ಥಾನದ ಅರ್ಚಕರಾಗಿ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಂಸಿ ಬಸವರಾಜ್ ಅವÀರು ತಿಪ್ಪೇರುದ್ರ ಸ್ವಾಮಿಯ ಬಗ್ಗೆ ಇಟ್ಟಿರುವ ಅಪಾರವಾದ ನಂಬಿಕೆಯನ್ನು ವ್ಯಕ್ತಪಡಿಸಿದರು. ಇನ್ನು ಅವರ ಕೈಯಲ್ಲಿ ಸಾಕ್ಷಾತ್ ಶ್ರೀ ತಿಪ್ಪೇರುದ್ರ ಸ್ವಾಮಿಯ ಅಚ್ಚೆಯನ್ನೇ ಹಾಕಿಸಿಕೊಂಡು ಆರಾಧ್ಯ ಭಕ್ತನಾಗಿ ದೇವರಿಗೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು. ಎಂ ಸಿ ಬಸವರಾಜ್ ರವರು ನನ್ನ ಆಪ್ತ ಸ್ನೇಹಿತರು ಹೌದು . ಒಂದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ನಾವು. ಇಂಥ ಸ್ನೇಹಿತ ಸಿಕ್ಕಿರುವುದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಸಾಕ್ಷ ಚಿತ್ರವನ್ನು ಭಕ್ತಿ ಪೂರ್ವಕವಾಗಿ ಯಶಸ್ವಿಗೊಳಿಸುತ್ತೇವೆ. ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರ ಪತ್ರಿಕಾ ಸಂಪರ್ಕ, ದೇವು ಅವರ ಪ್ರಚಾರಕಲೆ ಇದೆ ಎಂದು ತಿಳಿಸಿದರು.