ಮಧುಮತಿ ರಾವುತಪ್ಪಾ ಆದೆಣ್ಣಿಗೆ ಪಿಎಚ್‌ಡಿ ಪದವಿ

Jan 31, 2025 - 12:49
 0
ಮಧುಮತಿ ರಾವುತಪ್ಪಾ ಆದೆಣ್ಣಿಗೆ ಪಿಎಚ್‌ಡಿ ಪದವಿ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಮಧುಮತಿ ರಾವುತಪ್ಪಾ ಆದೆಣ್ಣಿ ಅವರು ಸಲ್ಲಿಸಿದ್ದ “ಎ ಸೋಶಿಯಾಲಾಜಿಕಲ್ ಸ್ಟಡಿ ಆಫ್ ಫ್ಲಡ್ ಅಫೆಕ್ಟೆಡ್ ವಿಕ್ಟಿಮ್ ವಿಲೆಜಿಸ್ ಇನ್ ಬಾಗಲಕೋಟ ಡಿಸ್ಟಿçಕ್ಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಮಧುಮತಿ ರಾವುತಪ್ಪಾ ಆದೆಣ್ಣಿ ಅವರು ಸಮಾಜಶಾಸ್ತç ವಿಭಾಗದ ಪ್ರೊ. ವಿಜಯಾ ಬಿ ಕೋರಿಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.

ಡಾಕ್ಟರೇಟ್ ಪದವಿ ಪಡೆದಿರುವ ಮಧುಮತಿ ರಾವುತಪ್ಪಾ ಆದೆಣ್ಣಿ ಅವರನ್ನು ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ. ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅವರು ಅಭಿನಂದಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.