ಲಕ್ಷ ಸದಸ್ಯತ್ವ ಅಭಿಯಾನಕ್ಕೆ ಶ್ರೀಶೈಲಗೌಡ ಬಿರಾದಾರ ಕರೆ

Sep 29, 2024 - 22:44
 0
ಲಕ್ಷ ಸದಸ್ಯತ್ವ ಅಭಿಯಾನಕ್ಕೆ ಶ್ರೀಶೈಲಗೌಡ ಬಿರಾದಾರ ಕರೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಸಿಂದಗಿ : ಬಿಜೆಪಿ ಸದಸ್ಯತ್ವ ಅಭಿಯಾನ ಸಮಿತಿಯ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ, ರಾ.ಪ್ರ.ಕಾ. ಸಿ.ಟಿ. ರವಿ ವಿ.ವಿಪಕ್ಷ ನಾಯಕ ಚಲುವರಾಯಸ್ವಾಮಿ ಸೇರಿದಂತೆ ರಾಜ್ಯ ನಾಯಕರ ಆದಿಯಾಗಿ ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಒಳಗೊಂಡಂತೆ ಎಲ್ಲರ ಮಾರ್ಗದರ್ಶನದಲ್ಲಿ ಸದಸ್ಯತ್ವ ಅಭಿಯಾನ ಮಾಡುತ್ತಿದ್ದೆವೆ ಸದಸ್ಯತ್ವ ಅಭಿಯಾನದಲ್ಲಿ ಹೇಗೆ ದೇಶಕ್ಕೆ ಯಲಹಂಕ ಕ್ಷೇತ್ರ ಸದಸ್ಯತ್ವ ಅಭಿಯಾನದಲ್ಲಿ ಪ್ರಥಮ ಸ್ಥಾನ ಪಡೆದಿದೆಯೊ ಹಾಗೆಯೇ ಸಿಂದಗಿ ಕ್ಷೇತ್ರದಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಮಾಡಿಸಿ ರಾಜ್ಯಕ್ಕೆ ಸಿಂದಗಿಯನ್ನ ಮೊದಲ ಸ್ಥಾನದತ್ತ ಕರೆದೊಯ್ಯುವ ಗುರಿಯನ್ನು ಇಟ್ಟು ಲಕ್ಷ ಸದಸ್ಯತ್ವ ಅಭಿಯಾನ ಮಾಡುತ್ತಿದ್ದು ಕ್ಷೇತ್ರದ ಜನರು ಸಹಕರಿಸಬೇಕು ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಾ ಹೇಳಿದರು.

 

ಶನಿವಾರ ದೇಶಾದ್ಯಂತ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನದ ಭಾಗವಾಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿದಲ್ಲಿ Àಸದ್ಗರು ವಿರೇಶ್ವರ ಶಿವಯೋಗಿಗಳ ದೇವಸ್ಥಾನ ಆವರಣದಲ್ಲಿ ಗ್ರಾಮಸ್ಥರಿಂದ ಬಿಜೆಪಿ ಸದಸ್ಯತ್ವ ನೊಂದಣಿ ಮಾಡಿಕೊಂಡು ಅವರು ಮಾತನಾಡಿದರು.

   

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಸರಕಾರ ಅಭಿವೃದ್ಧಿ ಹಾಗೂ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಂಡು ಜನ ವಿರೋಧಿ ಆಡಳಿತ ಮತ್ತು ಸಿಎಂ ಸೇರಿದಂತೆ ಎಲ್ಲರೂ ಭ್ರಷ್ಟಾಚಾರ ಮಾಡುವಲ್ಲಿ ನಿರತರಾಗಿದ್ದಾರೆ ಸಿಎಂ ಸಿದ್ದರಾಮಯ್ಯರ ನಡೆ ಕಂಡು ರಾಜ್ಯದ ಜನ ಅಸಹ್ಯ ಪಡುತ್ತಿದ್ದಾರೆ ಮಾತು ಎತ್ತಿದರೆ ನನ್ನ ಮುತೈದು ವರ್ಷ ರಾಜಕೀಯ ಜೀವನದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದವನು ನಾನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಅನುಯಾಯಿ ಎಂದು ಹೇಳುತ್ತಾರೆ ಆದರೆ ದಿ.ಹೆಗಡೆಯವರಿಗೆ ಇವರಿಗೆ ಅಜಾಗಜಾಂತರ ವ್ಯತ್ಯಾಸವಿದೆ ಅಂದು ಹೆಗಡೆಯವರ ತಮ್ಮ ಮೇಲೆ ಪೋನ್ ಕದ್ದಾಲಿಕೆ ಆರೋಪ ಬಂದಿದ್ದೆ ತಡ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಇಂದು ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪದಡಿ ತನಿಖೆಗೆ ಕೋರ್ಟ್ ಆದೇಶ ನೀಡಿದರು ನಾನು ರಾಜಿನಾಮೆ ನೀಡಲ್ಲ ಎಂದು ಭಂಡತನ ತೊರುತ್ತಿರುವ ನಿದ್ದೆರಾಮಯನವರು ಹೆಗಡೆಯವರ ಅನುಯಾಯಿ ಅಗಲು ಸಾದ್ಯವಿಲ್ಲ ಇದು ತುಂಬಾ ನಾಚಿಗೇಡಿನ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿ ಎಚ್ ಬಿರಾದಾರ. ಮಲ್ಲಣ್ಣ ಮನಗೂಳಿ .ಮಲ್ಲಯ್ಯ ಹೀರೆಮಠ, ಗಂಗಾಧರ ಶಿವಸಿಂಪಿಗೇರ,ಎಮ್ ಡಿ ಪಾಟೀಲ್ ಗೊಲ್ಲಾಳಪಗೌಡ ಬಿರಾದಾರ .ಅರವಿಂದಗೌಡ ರಾಮಗೊಂಡ (ಬಿರಾದಾರ ) ರುದ್ರಗೌಡ ಪಾಟೀಲ ಶಿವಶರಣ ರಾಮಗೊಂಡ, ಬಸಯ್ಯ ಮಠಪತಿ, ಪ್ರಶಾಂತ ಶಿವಶಿಂಪಿ. ಶಂಕರಲಿಂಗ ನಂದಗೇರಿ ಆನಂದ ಪವಾರ,ಶಿವರಾಜ ಗಿರಿಗೌಡರ ಎಸ್ ಆರ್ ಪಾಟೀಲ್ ಸೇರಿದಂತೆ ಪಕ್ಷದ ಅಪಾರ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.