ಕರವೇ ಜಿಲ್ಲಾಧ್ಯಕ್ಷರಾಗಿ ಶೇಷರಾವ ಮಾನೆ ನೇಮಕ

ವಿಜಯಪುರ : ರಾಜ್ಯಾಧ್ಯಕ್ಷ ಶಿವರಾಮೇಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆಯು ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಜರುಗಿತು.
ರಾಜ್ಯಾದ್ಯಕ್ಷ ಶಿವರಾಮೇಗೌಡರ ಆದೇಶದ ಮೇರೆಗೆ ಸಾಹಿತಿ ಶೇಷರಾವ್ ಮಾನೆಯವರನ್ನು ಜಿಲ್ಲಾಧ್ಯಕ್ಷರನ್ನಾಗಿ ರಾಜ್ಯ ವಕ್ತಾರ ಬಿ.ಎಂ. ಪಾಟೀಲರು ನೇಮಕ ಮಾಡಿ ಆದೇಶಿಸಲಾಯಿತು. ಅದರಂತೆ ಸಾಧಿಕ ಶೇಖ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನ್ಯಾಯವಾದಿ ಎಂ.ಎA. ಖಲಾಸಿಯವರನ್ನು ಜಿಲ್ಲಾ ಉಪಾದ್ಯಕ್ಷರನ್ನಾಗಿ ಭಾರತಿ ಟಂಕಸಾಲಿ ಅವರನ್ನು ಮಹಿಳಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಗೀತಾ ವೈದ್ಯರನ್ನು ನಗರ ಘಟಕ ಅದ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದರು.
ಜಯಶ್ರೀ ನಂದಿಕೋಲ, ರಾಜೇಶ್ವರಿ ಹಿರೇಮಠ, ಸುಲೋಚನಾ ತಾಂಬೆ ಹಾಗೂ ಪಾರ್ವತಿ ಪಾಟೀಲರನ್ನು ಮಹಿಳಾ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ೨೫ನೇ ವರ್ಷ ಕರವೇ ಬೆಳ್ಳಿ ಹಬ್ಬದ ಸಂಭ್ರಮವನ್ನು ಬರುವ ಫೆಬ್ರುವರಿ ೧ ರಂದು ಬೆಂಗಳೂರಿನ ಟಾನ್ ಹಾಲನಲ್ಲಿ ನಡೆಯಲಿದೆ.
ಸಂಭ್ರಮದಲ್ಲಿ ಸುಮಾರು ಐದು ಲಕ್ಷ್ ಜನ ಸೇರಲಿದ್ದರೆ ಎಂದು ರಾಜ್ಯ ಉಪಾಧ್ಯಕ್ಷ ಅಜ್ಜಪ್ಪಣ್ಣ ಕರಡಕಲ್ಲ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಡಾ. ಎನ್.ಐ. ಪಾಟೀಲ, ಮೈನುದ್ದೀನ ವಾಲಿಕಾರ, ಅಷ್ಪಾಕ ಇನಾಮದಾರ, ಶರಣಗೌಡ ಬಿರಾದಾರ, ಅಸ್ಪಾಕ ರೋಜಿನದರ, ಕೆ.ಕೆ. ಬನ್ನಟ್ಟಿ, ಬಾಗಲಕೋಎಯ ಜಿಲ್ಲಾ ಸಹ ಸಂಚಾಲಕ ಸಂತೋಷ ಚಿನಿವಾಲ, ಕುಷ್ಟಿ ತಾಲೂಕಾ ಅಧ್ಯಕ್ಷ ಮಾರುತಿ ಹಲಗಿ, ಬೆಳಗಾವಿ ಜಿಲ್ಲಾಧ್ಯಕ್ಷ ನಾಜಿದ ಕಾರ್ಯಾದರ್ಶಿ ಜಗನ್ನಾಥ ಬಮಮನೆ ಬೆಳಗಾವಿ ಜಿಲ್ಲಾ ಸಂಚಾಲಕ ಎಸ್. ಬಾಗವಾನ ಶಿವಾನಂದ ಶೆಲ್ಲಿಕೇರಿ ಇಮಿತಿಯಾಜ ಮುಲ್ಲಾ ಹಸನ ಶೇಖ ಮಲ್ಲಿಕಾರ್ಜುನ ಚೀಲಾ ಇಂಡಿ ತಾಲೂಕಾ ಅಧ್ಯಕ್ಷ ದಡೇದ ಶಕೀಲ ಗಡೇದ ಕೃಷ್ಣಮೂರ್ತಿ ಮೇಲಿನಮನಿ ಜಿ.ಆರ್. ಹತ್ತೂರ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದರು.