ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಕೊಲ್ಹಾರ: ಎಂ ಎಚ್ ಎಮ್ ಪ್ರೌಢಶಾಲೆ ಆಲಮಟ್ಟಿ ಇವರ ಆಶ್ರಯದಲ್ಲಿ ಗುರುವಾರ ಜರುಗಿದ 2024-25 ಸಾಲಿನ ಬಸವನ ಬಾಗೇವಾಡಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೊಲ್ಹಾರ ತಾಲೂಕಿನ ಕುಬಡ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಿಂಚಿ ವಿಜೇತರಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದಲ್ಲಿ ಶ್ವೇತಾ ಬಾಡಗಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ,ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ,800 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ ಹಾಗೂ ದೀಪಾ ಪುಂಡಿಬೀಜ ತ್ರಿವಿಧ ಜಿಗಿತ ದ್ವಿತೀಯ ಸ್ಥಾನ,100 ಮೀ ಹರ್ಡಲ್ಸ್ ಪ್ರಥಮ ಐಶ್ವರ್ಯ ಛಲವಾದಿ 400 ಮೀ ಹರ್ಡಲ್ಸ್ ಪ್ರಥಮ,ಸೌಂದರ್ಯ ಹಳ್ಳಿ ಭರ್ಜಿ ಎಸೆತ ತೃತೀಯ,ಮಮತಾಜ ಜಕಾತಿ ಗುಂಡು ಎಸೆತ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ
ಬಾಲಕರ ವಿಭಾಗದಲ್ಲಿ ಕಿರಣ ಬೆಳ್ಳುಬ್ಬಿ ತ್ರಿವಿಧ ಜಿಗಿತ ಪ್ರಥಮ,400 ಮೀ ಹರ್ಡಲ್ಸ್ ಪ್ರಥಮ,800 ಮೀ ಓಟ ದ್ವಿತೀಯ ಸ್ಥಾನ, ಸುಮಿತ ರಾಠೋಡ 1500 ಮೀ ಓಟ ದ್ವಿತೀಯ,400 ಮೀ ಹರ್ಡಲ್ಸ್ ದ್ವಿತೀಯ, ಸಿದ್ದರಾಮ ಕೋಟ್ಯಾಳ 110 ಮೀ ಹರ್ಡಲ್ಸ್ ಪ್ರಥಮ,ಪ್ರವೀಣ ಹುನಗುಂದ 5ಕಿಮಿ ನಡಿಗೆ ಸ್ಪರ್ದೆ ಪ್ರಥಮ,ಅಭಿಷೇಕ ಬೀಳಗಿ 5ಕಿಮಿ ನಡಿಗೆ ಸ್ಪರ್ದೆ ದ್ವಿತೀಯ ರಿಹಾನ ಜಮಾದಾರ ಹ್ಯಾಮರ ಎಸೆತ ದ್ವಿತೀಯ,ಆಕಾಶ ಬಿರಾದಾರ ತ್ರಿವಿಧ ಜಿಗಿತ ತೃತೀಯ ಸ್ಥಾನ ಗಳಿಸಿ ಕ್ರೀಡಾಕೂಟದಲ್ಲಿ ಮಿಂಚನ್ನು ಹರಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬಾಲಕಿಯರ ವಾಲಿಬಾಲ್ ಪ್ರಥಮ ಐಶ್ವರ್ಯ ಬಿರಾದಾರ,ಐಶ್ವರ್ಯ ಹಳ್ಳಿ ನಾಯಕತ್ವದ ಮಧುರಾ ಢಾಳೆ,ಆಶಾ ಕುಂಬಾರ,ದೀಪಾ ಪುಂಡಿಬೀಜ,ಸೌಂದರ್ಯ ಹಳ್ಳಿ,ಲಕ್ಷ್ಮೀ ಬಿರಾದಾರ,ಸ್ವಾತಿ ಶಿವಾಪುರ,ಐಶ್ವರ್ಯ ಛಲವಾದಿ,ಐಶ್ವರ್ಯ, ಉಗ್ರಾಣ,ಸ್ಫೂರ್ತಿ ಛತ್ರಕೊಟಿ, ಸುಶ್ಮಿತಾ ಉಗ್ರಾಣ,ಸಾನಿಯಾ ರೋಣಿಹಾಳ ತಂಡ ಪ್ರಥಮ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ.
ಬಾಲಕರ ಬ್ಯಾಡ್ಮಿಂಟನ್ ಪ್ರಥಮ ಆಕಾಶ ದಿನ್ನಿ,ಆಕಾಶ ಬಿರಾದಾರ ನಾಯಕತ್ವದ*"ಬಸವರಾಜ ಸಾಳುಂಕೆ,ನಾಗೇಶ ನ್ಯಾಮಗೊಂಡ,ಸಂಗಮೇಶ ಹಲಗಲಿ,ಸದಾಶಿವ ಕೋಲಕಾರ, ಸಿದ್ದಾರ್ಥ ಬಣಜಿಗೇರ,ಗುಲಾಬ ಢಾಳೆ, ಪ್ರೀತಮ ತೊರತ್, ಅರುಣ ತರಲಗಟ್ಟಿ,, ಪ್ರವೀಣ ಹುನಗುಂದ ತಂಡ ಪ್ರಥಮ ಸ್ಥಾನ.
ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ ಲಕ್ಷ್ಮೀ ಇಂಡಿ, ದಾನಮ್ಮ ಹಿರೇಕುರಬರ ನೇತೃತ್ವದ ಸಾಕ್ಷೀ ಕಾಖಂಡಕಿ, ಶ್ವೇತಾ ಬಾಡಗಿ, ಸೀಮಾ ಅಂಬಿಗೇರ, ಸುಚಿತ್ರಾ ರಾಥೋಡ,ಸೌಭಾಗ್ಯಲಕ್ಷ್ಮೀ ಚವ್ಹಾಣ,ತಸ್ಲಿಂ ಸಾರವಾಡ ತಂಡ ಸಂಘಟನಾತ್ಮಕ ಹೋರಾಟದಿಂದ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಕುಮಾರ ನಿ ಹೀರೆಮಠ, ಕ್ರೀಡಾ ತಂಡದ ಮ್ಯಾನೇಜರಾದ ಸುಮನ ಗಿರಣಿವಡ್ಡರ ಅವರಿಗೆ ಮುಖ್ಯೋಪಾಧ್ಯಾಯರಾದ ಎನ್ ಪಿ ಹೋನ್ನಾಕಟ್ಟಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಚನಗೊಂಡಪ್ಪ ಬಿರಾದಾರ,ಸದಸ್ಯರಾದ ಸಂಜು ಸಾಳುಂಕೆ,ಚಂದ್ರು ಅಂಬಿಗೇರ, ಚನ್ನಪ್ಪ ಬಣಜಿಗೇರ , ಹಾಗೂ ಸರ್ವ ಸದಸ್ಯರು, ಶಿಕ್ಷಕರಾದ ಮಂಜುಳಾ ಸಾರವಾಡ,ಜಗದೀಶ ಪತ್ತಾರ, ಪ್ರೇಮ ಢವಳಗಿ, ಮಲ್ಲಪ್ಪ ಬುತಾಳಿ,ಸುರೇಶ್ ಎಲ್ಲರೂ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.