ಹಣಮಾಪುರ ಗ್ರಾ.ಪಂ ಅಧ್ಯಕ್ಷ ತೇಜಾ ಕುಬ್ಬಕಡ್ಡಿ ಆಯ್ಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಕೊಲ್ಹಾರ:ತಾಲೂಕಿನ ಹಣಮಾಪುರ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಗುರುವಾರ ಜರುಗಿತು.
ಅಧ್ಯಕ್ಷರಾಗಿ ಶ್ರೀಮತಿ ತೇಜಾ ಸಂಗಪ್ಪ ಕುಬಕಡ್ಡಿ, ಉಪಾಧ್ಯಕ್ಷರಾಗಿ ಸರಸ್ವತಿ ನಿಂಗಪ್ಪ ಬಿರಾದಾರ ಅವಿರೋದವಾಗಿ ಆಯ್ಕೆಯಾದರು.
ಒಟ್ಟು 18 ಸದಸ್ಯರ ಬಲಾಬಲದ ಹಣಮಾಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ "ಬ", ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ತೇಜಾ ಸಂಗಪ್ಪ ಕುಬಕಡ್ಡಿ, ಉಪಾಧ್ಯಕ್ಷರ ಸ್ಥಾನಕ್ಕೆ ಸರಸ್ವತಿ ನಿಂಗಪ್ಪ ಬಿರಾದಾರ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಸುನೀಲ ಮುದ್ದಿನ ಅಧ್ಯಕ್ಷರಾಗಿ ತೇಜಾ ಸಂಗಪ್ಪ ಕುಬಕಡ್ಡಿ, ಉಪಾಧ್ಯಕ್ಷರಾಗಿ ಸರಸ್ವತಿ ನಿಂಗಪ್ಪ ಬಿರಾದಾರ ಅವರನ್ನು ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ ಮುಖಂಡರಾದ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ತಾನಾಜಿ ನಾಗರಾಳ, ಗುರುನಗೌಡ ಬಿರಾದಾರ, ಸಂಗಪ್ಪ ಕುಬಕಡ್ಡಿ, ಮಹೇಶ ತೋಟಗೇರ, ಶ್ರೀಕಾಂತ ಗಣಿ, ಮುತ್ತುಸಾಹುಕಾರ ಹಳ್ಳೂರ, ಸಂಗಮೇಶ ಚಲವಾದಿ ಹಾಗೂ ಇನ್ನಿತರರು ಇದ್ದರು.