ಶರವೇಗದಲ್ಲಿ ಬೆಳೆಯುತ್ತಿರುವ ಕೊಲ್ಹಾರ ಪಟ್ಟಣ : ಸಚಿವ ಶಿವಾನಂದ ಪಾಟೀಲ

Jan 19, 2025 - 20:38
 0
ಶರವೇಗದಲ್ಲಿ ಬೆಳೆಯುತ್ತಿರುವ ಕೊಲ್ಹಾರ ಪಟ್ಟಣ : ಸಚಿವ ಶಿವಾನಂದ ಪಾಟೀಲ

ಕೊಲ್ಹಾರ : ವಿಜಯಪುರ, ಬಾಗಲಕೋಟೆ ನಗರಗಳ ಮದ್ಯದಲ್ಲಿರುವ ಕೊಲ್ಹಾರ ಪಟ್ಟಣ ತಾಲೂಕ ಕೇಂದ್ರವಾಗಿ ಆರ್ಥಿಕತೆಯಲ್ಲಿ ಶರವೇಗದಲ್ಲಿ ಬೆಳೆಯುತ್ತಾ ಸಾವಿರಾರು ಜನರಿಗೆ ಆಶ್ರಯ ನೀಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಎಪಿಜೆ ಅಬ್ದುಲ್‌ ಕಲಾಂ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪಟ್ಟಣ ಸಾವಿರಾರು ಜನರಿಗೆ ಆಶ್ರಯ ನೀಡಿ ಸಲುಹುತ್ತಿದೆ. ನವ ನವೀನ ವ್ಯಾಪಾರ ವ್ಯವಹಾರದ ಮೂಲಕ ಆರ್ಥಿಕತೆಯತ್ತ ಹೆಜ್ಜೆ ಇಡುತ್ತಿರುವ ಕೊಲ್ಹಾರ ಪಟ್ಟಣದಲ್ಲಿ ಉಸ್ಮಾನಪಟೇಲ ಪಟೇಲ ಜನರ ಅನುಕೂಲಕ್ಕಾಗಿ ಬ್ಯಾಂಕ ತೆರೆದಿದ್ದಾರೆ ಸಾರ್ವಜನಿಕರು ಉತ್ತಮ ವ್ಯವಹಾರದ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿ ಎಪಿಜೆ ಅಬ್ದುಲ ಕಲಾಂ ಅವರ ತತ್ವಾದರ್ಶಗಳಂತೆ ಉಸ್ಮಾನಪಟೇಲ ಪಟೇಲ ಖಾನ್ ಅವರು ಭಾವೈಕ್ಯತೆಯ ತತ್ವ ಸಾರುವಂತೆ ಹಿಂದೂ, ಮುಸ್ಲಿಂ ಸಮಾನ ನಿರ್ದೇಶಕರನ್ನು ನೇಮಿಸಿಕೊಂಡು ಬ್ಯಾಂಕ ಪ್ರಾರಂಭಿಸಿದ್ದು ನೂತನವಾಗಿ ಪ್ರಾರಂಭವಾಗಿರುವ ಸಹಕಾರ ಸಂಘವು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಗಜೇಂದ್ರ ಗಡದ ತಳ್ಳಿಹಾಳ ಕೋಡಿಮಠದ ಡಾ.ಶರಣಬಸವ ಮಹಾಸ್ವಾಮಿಗಳು, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಸಂಘದ ಅಧ್ಯಕ್ಷ ಉಸ್ಮಾನಪಟೇಲ ಖಾನ್ ಹಾಗೂ ಇನ್ನಿತರರು ಮಾತನಾಡಿದರು.

ವೇದಿಕೆಯ ಮೇಲೆ ಕಲ್ಲು ದೇಸಾಯಿ ವಿನೀತಕುಮಾರ, ಆರ್.ಬಿ ಪಕಾಲಿ, ದೇಸಾಯಿ, ಸಿ.ಎಂ ಗಣಕುಮಾರ, ನಜೀರ ಕಾಜಿ ಹಾಗೂ ಇನ್ನಿತರರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.