ಕಸಾಪ ಸಮ್ಮೇಳನದಲ್ಲಿ ಮೃಷ್ಠಾನ್ನ ಭೋಜನದ ವ್ಯವಸ್ಥೆ

Sep 29, 2024 - 23:37
 0
ಕಸಾಪ ಸಮ್ಮೇಳನದಲ್ಲಿ ಮೃಷ್ಠಾನ್ನ ಭೋಜನದ ವ್ಯವಸ್ಥೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ತಾಳಿಕೋಟೆ : ಅಕ್ಟೋಬರ ೧ ರಂದು ಜರುಗಲಿರುವ ಕನ್ನಡ ಸಾಹಿತ್ಯ ಪರಿಷತ್ತೀನ ತಾಳಿಕೋಟೆ ತಾಲೂಕಾ ಸಮ್ಮೇಳನದಲ್ಲಿ ಪಾಲ್ಗೋಳ್ಳುತೀರುವ ಅಸಖ್ಯಾಂತ ಕನ್ನಡ ಅಭಿಮಾನಿಗಳಿಗಾಗಿ ಮೃಷ್ಠಾನ್ನ ಭೋಜನದ ವ್ಯವಸ್ಥೆ ಕುರಿತು ಶುಕ್ರವಾರರಂದು ಕ.ಸಾ.ಪ ಕಾರ್ಯಾಲಯದಲ್ಲಿ ಕರೆಯಲಾದ ದಾಸೋಹ ಸಮಿತಿಯವರ ತೀರ್ಮಾನದಂತೆ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು.   

ಈ ಕುರಿತು ಅರ್ಧ ಗಂಟೆಕಾಲ ಕ.ಸಾ.ಪ ಅಧ್ಯಕ್ಷ ಆರ.ಎಲ್.ಕೊಪ್ಪದ , ದತ್ತಿ ಸಂಚಾಲಕರಾದ ಆರ.ಬಿ.ದಾನಿ ಹಾಗೂ ದಸೋಹ ಸಮಿತಿಯ ಅಧ್ಯಕ್ಷರಾದ ಆರ.ವಿ.ಜಾಲವಾದಿ ಅವರು ಉಪಸ್ಥಿತ ದಾಸೋಹ ಸಮಿತಿಯವರ ನೀರ್ಣಯದಂತೆ ಭೋಜನದ ವ್ಯವಸ್ಥೆಗಾಗಿ ಸಿಹಿ ಪದಾರ್ಥವಾದ ‘ಮಾದಲಿ’ ತಯಾರಿಸುವ ಕುರಿತು ಹಾಗೂ ‘ಅನ್ನ-ಸಾಂಬಾರ’ ತಯಾರಿಸುವ ನೀರ್ಣಯ ಕೈಗೊಳ್ಳಲಾಯಿತು. ದಾಸೋಹ ಸಮತಿಯ ಅಧ್ಯಕ್ಷ ಪ್ರೊ. ಆರ.ವಿ.ಜಾಲವಾದಿ ಅವರು ಮಾತನಾಡಿ ಈ ತಾಲೂಕಾ ಸಮ್ಮೇಳನದಲ್ಲಿ ಸುಮಾರು ಹತ್ತುಸಾವಿರಕ್ಕೂ ಮೇಲ್ಪಟ್ಟು ಜನಸಂಖ್ಯೆ ಬರುವ ನೀರಿಕ್ಷೆ ಇದೆ ಎಲ್ಲರಿಗೂ ಊಟದಲ್ಲಿ ಯಾವೂದೇ ತೊಂದರೆಯಾಗದಂತೆ ನೋಡಿಕೊಳ್ಳಲೂ ಕಾರ್ಯಕರ್ತರಿಗೆ ಹಾಗೂ ಸಮಿತಿಯ ಸದಸ್ಯರುಗಳಿಗೆ ಸೂಚಿಸಿ ಎಲರೂ ಕೈ ಜೋಡಿಸೋಣ ಎಂದರು.    

ಇನ್ನೋರ್ವ ಕ.ಸಾ.ಪ ಅಧ್ಯಕ್ಷ ಆರ.ಎಲ್.ಕೊಪ್ಪದ ಅವರು ಮಾತನಾಡಿ ಈಗಾಗಲೇ ಕೇಲವು ರಚನೆಗೊಂಡ ಸಮಿತಿಗಳ ಸದಸ್ಯರಿಗೂ ಕೂಡ ಆಯಾ ಕಾರ್ಯಗಳ ತಕ್ಕಂತೆ ಕಾರ್ಯ ನೀರ್ವಹಿಸಲೂ ಸೂಚಿಸಲಾಗಿದೆ ಅವರು ಕೂಡಾ ಇಗಾಗಲೇ ಕೆಲವರು ಕಾರ್ಯೋನ್ಮುಕರಾಗಿದ್ದಾರೆ ಇನ್ನು ಕೇಲವರು ಕಾರ್ಯೋನ್ಮುಕಾರಾಗಲೂ ಸಿದ್ದರಾಗಿದ್ದಾರೆಂದರು.    

ಈ ಎಲ್ಲ ವಿಷಯಗಳ ಕುರಿತು ಕ.ಸಾ.ಪ ಜಿಲ್ಲಾ ಅಧ್ಯಕ್ಷರಾದ ಹಾಸಿಂಪೀರ ವಾಲಿಕಾರ ಅವರು ನಮ್ಮ ನದುರಿಗೆ ತರಬಯಸಿದ್ದಾರೆ ಅವರ ಮಾರ್ಗದರ್ಶನದಂತೆ ನಮ್ಮ ಸೇವಾಕಾರ್ಯ ಪ್ರಾರಂಭಗೊಂಡಿದೆ ಎಂದು ತಿಳಿಸಿದ ಅಧ್ಯಕ್ಷರಾದ ಆರ್ .ಎಲ್. ಕೊಪ್ಪದ ಅವರು ಈಗಾಗಲೇ ಕನ್ನಡದ ರಥ ಎಳೆಯಲೂ ಎಲ್ಲರೂ ಸಿದ್ದರಾಗಿ ನಿಂತಿದ್ದೇವೆ ಆದರೂ ಕೂಡಾ ಕನ್ನಡ ಸಾಹಿತ್ಯ ಪರೀಷತ್ತಿನ ಎಲ್ಲ ಸದಸ್ಯರೂ ಹಾಗೂ ಕನ್ನಡ ಅಭಿಮಾನಿಗಳೂ ತಮ್ಮ ಸಹಾಯ ಸಹಕಾರದೊಂದಿಗೆ ತಾಳಿಕೋಟೆ ತಾಲೂಕಾ ಪ್ರಥಮ ಕ.ಸಾ.ಪ ಸಮ್ಮೇಳನವನ್ನೂ ಯಶಸಿ ್ವಗೊಳಿಸಲೂ ಕೈಜೋಡಿ¸ Àಬೇಕೆಂದು ವಿನಂತಿಸಿದರು.    

ಈ ಸಮಯದಲ್ಲಿ ಕ.ಸಾ.ಪ ವತಿಯಿಂದ ರಚಿಸಲಾದ ದಾಸೋಹ ಸಮಿತಿಯ ಸರ್ವಸದಸ್ಯರು ಹಾಗೂ ಕ.ಸಾ.ಪ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.