ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಪಂದ್ಯಾವಳಿ ಸಂಘಟನೆಗೆ ಒಂದು ಕೋಟಿ ರೂ.ಬಿಡುಗಡೆ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ದಾಖಲಾಗಿರುವುದು ಹೆಮ್ಮೆಯ ಸಂಗತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Jan 10, 2025 - 02:21
 0
ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಪಂದ್ಯಾವಳಿ ಸಂಘಟನೆಗೆ ಒಂದು ಕೋಟಿ ರೂ.ಬಿಡುಗಡೆ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ದಾಖಲಾಗಿರುವುದು ಹೆಮ್ಮೆಯ ಸಂಗತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಬೆಂಗಳೂರು : ಹಾಕಿ ಕೊಡವರ ಜನಪ್ರಿಯ ಕ್ರೀಡೆಯಾಗಿದ್ದು, ಕೊಡಗಿನಲ್ಲಿ ಪ್ರತಿ ವರ್ಷ ಕುಂಡ್ಯೋಳಂಡ ಕೊಡವ ಕುಟುಂಬದ ವತಿಯಿಂದ ನಡೆಯುವ ಈ ಪಂದ್ಯಾವಳಿ ವಿಶ್ವ ದಾಖಲೆಯಾಗಿ ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿರುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 

ಅವರು ಇಂದು ಗೃಹ ಕಚೇರಿ ಕೃμÁ್ಣದಲ್ಲಿ ಪಂದ್ಯಾವಳಿ ಸಂಘಟಿಸಲು ಕುಂಡ್ಯೋಳಂಡ ಕೊಡವ ಕುಟುಂಬಕ್ಕೆ 1 ಕೋಟಿ ರೂಪಾಯಿಗಳ ಚೆಕ್ ಅನ್ನು ಯುವ ಸಬಲೀಕರಣ ಇಲಾಖೆ ವತಿಯಿಂದ ವಿತರಿಸಿ ಮಾತನಾಡಿದರು.

 

ಹಾಕಿ ಹುಟ್ಟಿದ್ದು ಭಾರತ ದೇಶದಲ್ಲಿ.ಧ್ಯಾನಚಂದ್ ಅವರಂತಹ ಹಾಕಿ ಮಾಂತ್ರಿಕ ಹುಟ್ಟಿದ ದೇಶ ನಮ್ಮದು. ಕ್ರಿಕೆಟ್ ಅμÉ್ಟೀ ಅಲ್ಲ, ಹಾಕಿ ಯಾರೂ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು ಮುಂದಿನ ದಿನಗಳಲ್ಲಿಯೂ ಈ ಪರಂಪರೆ ಮುಂದುವರೆಸಿಕೊಂಡು ಹೋಗಿ ಎಂದು ಹಾರೈಸಿದರು.

 

ಕೊಡಗು ಜಿಲ್ಲೆಯಲ್ಲಿ ಕುಂಡ್ಯೋಳಂಡ ಕೊಡವ ಕುಟುಂಬಗಳು ಪ್ರತಿ ವರ್ಷ ಸಾಂಪ್ರದಾಯಿಕ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಬಹಳಷ್ಟು ಕೊಡವರು ರಾಷ್ಟ್ರೀಯ ಹಾಕಿ ತಂಡದಲ್ಲಿ ಆಟ ಆಡಿದ್ದಾರೆ. ರಾಜ್ಯ ಸರ್ಕಾರ ಹಾಕಿ ಪಂದ್ಯಕ್ಕೆ ಎಲ್ಲಾ ರೀತಿಯ ಪೆÇ್ರೀತ್ಸಾಹ ನೀಡುತ್ತಾ ಬಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 

ಕಳೆದ ವರ್ಷ ಕೊಡವ ಹಾಕಿ ಕ್ರೀಡಾಕೂಟದಲ್ಲಿ 360 ತಂಡಗಳು, 4800 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಇದು ಗಿನ್ನೆಸ್ ಬುಕ್‍ನಲ್ಲಿ ದಾಖಲಾಗಿದೆ. ಹಾಕಿ ಪಂದ್ಯಾವಳಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲಾ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

 

ಈ ಸಂದರ್ಭದಲ್ಲಿ ಸಂಸದ ಅಜಯ್ ಮಾಕನ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣು ಪ್ರಕಾಶ್ ಪಾಟೀಲ್, ಸಚಿವರಾದ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೆÇನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.