ಮಂಜುಮ್ಮೆಲ್ ಬಾಯ್ಸ್ ನಂತರ ಕನ್ನಡಿಗರ ಮನಗೆದ್ದ ಆಲಪ್ಪುಳ ಜಿಮ್ಖಾನಾ

Apr 12, 2025 - 12:00
Apr 12, 2025 - 12:03
 0
ಮಂಜುಮ್ಮೆಲ್ ಬಾಯ್ಸ್   ನಂತರ ಕನ್ನಡಿಗರ ಮನಗೆದ್ದ ಆಲಪ್ಪುಳ ಜಿಮ್ಖಾನಾ


`ಅಲಪ್ಪುಳ ಜಿಮ್ಖಾನಾ’ ಆಕ್ಷನ್ ಚಿತ್ರವನ್ನು ಖಲೀದ್ ರೆಹಮಾನ್ ನಿರ್ದೇಶಿಸಿದ್ದು, ನಾಸ್ಲಿನ್ ಗಫೂರ್ ಮತ್ತು ಲುಕ್ಮಾನ್ ಅವರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಲುಕ್ಮಾನ್ ಅವರನ್ ಮತ್ತು ಗಣಪತಿ ಎಸ್ ಪೊದುವಾಲ್ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಸಂದೀಪ್ ಪ್ರದೀಪ್, ಅನಘಾ ರವಿ, ಫ್ರಾಂಕೊ ಫ್ರಾನ್ಸಿಸ್, ಬೇಬಿ ಜೀನ್ ಮತ್ತು ಶಿವ ಹರಿಹರನ್ ಕೂಡ ನಟಿಸಿದ್ದಾರೆ.

ಲುಕ್ಮಾನ್ ಅವರಣ್ ಈ ಹಿಂದೆ ಆಪರೇಷನ್ ಜಾವಾ ಚಿತ್ರದಲ್ಲಿ ನಟಿಸಿದ್ದರೆ, ಗಣಪತಿ ಅವರು ಬೇಸಿಲ್ ಜೋಸೆಫ್ ನಾಯಕನಾಗಿ ನಟಿಸಿರುವ ಜಾನ್-ಎ-ಮ್ಯಾನ್ ಚಿತ್ರದಲ್ಲಿ ನಟಿನೆಯ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದರು. `ಅಲಪ್ಪುಳ ಜಿಮ್ಖಾನಾ’ ಚಿತ್ರವು ಪ್ಲಸ್-ಟು ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಹದಿಹರೆಯದವರ ಕಥೆಯನ್ನು ಹೊಂದಿದ್ದು, ಕ್ರೀಡಾ ಕೋಟಾದ ಮೂಲಕ ಕಾಲೇಜು ಪ್ರವೇಶವನ್ನು ಪಡೆಯಲು, ಯುವಕರು ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಏನೆಲ್ಲಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರ ಬಿಚ್ಚಿಡುತ್ತಾ ಹೋಗುತ್ತದೆ. ಇನ್ನು, `ಆಲಪ್ಪುಳ ಜಿಮ್ಖಾನಾ'
ಚಿತ್ರವು ಈ ಹಿಂದೆ ತೆರೆಕಂಡು ಕನ್ನಡಿಗರ ಮನಗೆದ್ದಿದ್ದ `ಮಂಜುಮ್ಮೆಲ್ ಬಾಯ್ಸ್’ ಚಿತ್ರದಂತೆ ಕರ್ನಾಟಕಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಚಿತ್ರಕಥೆಯನ್ನು ಖಾಲಿದ್ ಮತ್ತು ಶ್ರೀನಿ ಸಸೀಂದ್ರನ್ ಬರೆದಿದ್ದು,  ರತೀಶ್ ರವಿ ಸಂಭಾಷಣೆಯನ್ನು ರಚಿಸಿದ್ದಾರೆ. ಪ್ಲಾನ್ ಬಿ ಮೋಷನ್ ಪಿಕ್ಚರ್ಸ್ ಮತ್ತು ರೀಲಿಸ್ಟಿಕ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಖಾಲಿದ್, ಜಾಬಿನ್ ಜಾರ್ಜ್, ಸಮೀರ್ ಕಾರಟ್ ಮತ್ತು ಸುಬೀಶ್ ಕನ್ನಚೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಿಮ್ಶಿ ಖಾಲಿದ್ ಛಾಯಾಗ್ರಹಣ ಮತ್ತು ನಿಶಾದ್ ಯೂಸುಫ್ ಸಂಕಲನವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ವಿಷ್ಣು ವಿಜಯ್ ಸಂಗೀತ ಸಂಯೋಜಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.