ಐಟಿ ಉದ್ಯೋಗಿಗಳು ಶಕ್ತಿ ಮೀರಿ ದುಡಿಯುತ್ತಿದ್ದಾರೆ; ಸಂಗಮೇಶ ಉಪಾಸೆ

Sep 29, 2024 - 23:05
 0
ಐಟಿ ಉದ್ಯೋಗಿಗಳು ಶಕ್ತಿ ಮೀರಿ ದುಡಿಯುತ್ತಿದ್ದಾರೆ; ಸಂಗಮೇಶ ಉಪಾಸೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಬೆಂಗಳೂರು : ಕಾವೇರಿ ಆಸ್ಪತ್ರೆ ಬೆಂಗಳೂರು ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಹಾರೈಕೆ ಕುರಿತು ಅರಿವು ಮೂಡಿಸುವ ಸಲುವಾಗಿ ಎಲೆಕ್ಟ್ರಾನಿಕ್‌ ಸಿಟಿ ಮೊದಲ ಹಂತದಲ್ಲಿ ವಾಕ್‌ಥಾನ್‌, ರನ್‌ ,ಮತ್ತು ಸೈಕ್ಲೀಂಗ್‌, ಆಯೋಜನೆಗೊಳಿಸಿದ್ದರು.

 3,000 ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಬೆಳ್ಳಂಬೆಳಗ್ಗೆ ಈ ಕಾರ್ಯಕ್ರಮದಲ್ಲಿ ಬಾಗವಸಿದ್ದರು. ಅಲ್ಲದೆ ಅವರ ಕುಟುಂಬ ಸದಸ್ಯರು ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಕಾರ್ಮಿಕ ಇಲಾಖೆ ಜಂಟಿ ನಿರ್ದೇಶಕರಾದ ಸಂಗಮೇಶ ಉಪಾಸೆ ಐಟಿ ಉದ್ಯೋಗಿಗಳು ತಮ್ಮ ಸಂಸ್ಥೆಗಳಿಗೆ ಶಕ್ತಿ ಮೀರಿ ಒತ್ತಡದಲ್ಲಿ ದುಡಿಯುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ . ಆದ್ದರಿಂದ ತಮ್ಮ ಬಿಡುವಿನ ವೇಳೆಯಲ್ಲಿ ದೈಹಿಕ ಚಟುವಟಿಕೆ ಕಾರ್ಯಕಗಳಲ್ಲಿ ತೊಡಗುವುದು ಉತ್ತಮ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ ವಿಜಯ್‌ ಬಾಸ್ಕರನ್‌ ಹಾಗು ಸಿಬ್ಬಂದಿ ಹಾಜರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.