ಫೆ ೪ ರಂದು ಎರೆಹುಳು ತರಬೇತಿ

ಇಂಡಿ : ತಾಲೂಕಿನ ರೈತ ಬಾಂಧವರಿಗೆ ಎರೆಹುಳು ಗೊಬ್ಬರ ತಯಾರಿಸುವ ಮಾಹಿತಿ ಕುರಿತು ಪಟ್ಟಣದ ಕೃಷಿ ಉಪ ನಿರ್ದೇಶಕರ ಕಚೇರಿಯ ಸಬಾಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ ಫೆ ೪ರಂದು ತರಬೇತಿ ನೀಡಲಾಗುವದು ಎಂದು ಕೃಷಿ ಉಪ ನಿದೇರ್ಶಕ ಚಂದ್ರಕಾಂತ ಪವಾರ ತಿಳಿಸಿದ್ದಾರೆ.
ಎರೆಹುಳು ಬೆಳೆಯುವ ವಿಧಾನ, ಅದಕ್ಕೆ ಬೇಕಾಗುವ ಜಾಗದ ವಿಸ್ತೀರ್ಣದ ಮಾಹಿತಿ,ಮತ್ತು ಎರೆಹುಳು ಸಿಗುವ ಮಾಹಿತಿ ಜೊತೆಗೆ ಸರಕಾರದಿಂದ ಸವಲತ್ತುಗಳ ಕುರಿತು ಮಾಹಿತಿ ನೀಡಲಾಗುವದು ಎಂದು ಪವಾರ ತಿಳಿಸಿದ್ದಾರೆ.ಕೇವಲ ಮೂವತ್ತು ಜನ ರೈತರಿಗೆ ಮಾತ್ರಪ್ರವೇಶವಿದೆ. ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತದೆ.