ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಇಂಡಿ : ಸಮಾಜದ ಪರಿವರ್ತನೆ ಶಿಕ್ಷಣ ಕೇಂದ್ರದಿಂದ ಮಾತ್ರ ಸಾದ್ಯ, ವಿದ್ಯಾರ್ಥಿಗಳು ಉತ್ತಮ ಸಮಾಜದ ನಿರ್ಮಾತೃಗಳಾಗಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಶ್ರೀ ವ್ಹಿ. ವಾಯ್ ಪಾಟೀಲ ಪ್ರೌಢ ಶಾಲೆ ಪಡನೂರ ನೂತನ ಶಾಲಾ ಕೋಣಿಗಳ ಉದ್ಘಾಟನೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪಡನೂರ ನೂತನ ಸ್ಮಾರ್ಟ ಕ್ಲಾಸ್ ಉದ್ಘಾಟನಾ ಸಮಾರಂಭದ ಮಾತನಾಡಿದರು. ಶಿಕ್ಷಣ ಮನುಷ್ಯನಿಗೆ ಆಭರಣವಿದ್ದಂತೆ ಒಂದು ದೇಶದ ಪ್ರಗತಿಗೆ ಶಿಕ್ಷಣ ಮುಖ್ಯ ನನ್ನ ರಾಜಕೀಯ ಜೀವನದಲ್ಲಿ ಅತೀ ಹೆಚ್ಚು ಶಿಕ್ಷಣಕ್ಕೆ ಮಹತ್ವ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ವಿಧದಲ್ಲಿ ಶಿಕ್ಷಣ ಅಭಿವೃದ್ದಿಪಡಿಸೋಣ ಎಂದರು.
ಸಾನಿಧ್ಯ ವಹಿಸಿದ ಅಂತರಾಷ್ಟ್ರೀಯ ಗುರುದೇವ ಯೋಗಾಶ್ರಮ ಬಾಲಗಾಂವ-ಕಾತ್ರಾಳ ಡಾ. ಅಮೃತಾನಂದ ಮಹಾಸ್ವಾಮಿಗಳು ನ್ಯಾಯದ ಮನೆತನಕ್ಕೆ ವಿಠ್ಠಲಗೌಡ ಪಾಟೀಲ, ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಬೀದರ ಶ್ರೀಮಠದ ಶಿವುಕುಮಾರ ಮಹಾಸ್ವಾಮಿಗಳು, ಸಾಹಿತಿಕವಾಗಿ ಡಾ. ಮೇತ್ರಿ ರಾಜಕೀಯ ಸಂತರಾಗಿ ಯಶವಂತರಾಯಗೌಡ ಪಾಟೀಲರಾಗಿದ್ದು. ಪಡನೂರ ಗ್ರಾಮ ಪುಟ್ಟದಾದರೂ ಸಾಧನೆಯ ಶಿಖರ ಎರಿದ ಸಾಧಕರು ಅನೇಕರು ಇವರ ಆದರ್ಶಗಳು ಇಂದಿನ ಯುವಪಿಳಿಗೆ ಅಳವಡಿಸಿಕೊಳ್ಳಬೇಕು.ಶಿಕ್ಷಣ ಮನುಷ್ಯನ ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ ಎಂದರು.
ಸಾಹಿತಿ ಮಲ್ಲಿಕಾರ್ಜುನ ಮೇತ್ರಿ , ಡಾ.ಬಸವಾನಂದ ಮಹಾಸ್ವಾಮಿಗಳು , ಮ.ಫ.ಚ ಸಿದ್ದರಾಮೇಶ್ವರ ಪಟ್ಟದ ದೇವರು ಗೋರ ಚಿಂಚೋಳ್ಳಿ ಸಾನಿಧ್ಯವಹಿಸಿ, ಭಾಗಣ್ಣಾ ಹರಳಯ್ಯಾ, ಡಾ.ಬಸವಾನಂದ ಮಹಾಸ್ವಾಮಿಗಳು , ಮ.ಫ.ಚ ಸಿದ್ದರಾಮೇಶ್ವರ ಪಟ್ಟದ ದೇವರು ಗೋರ ಚಿಂಚೋಳ್ಳಿ, ಶರಣಬಸಪ್ಪಾ.ಎನ್ ಕೆ, ಧನರಾಜ ಮುಜಗೊಂಡ ಮಾತನಾಡಿದರು.
ಪಡನೂರ ಗ್ರಾಪಂ ಅಧ್ಯಕ್ಷ ಕ್ಷಡಕ್ಷರಿ ಮೇತ್ರಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸೌದಾಗರ, ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಶೀಲ್ದಾರ ಬಿ.ಎಸ್ ಕಡಕಭಾವಿ, ಪೊಲೀಸ್ ಉಪಾಧೀಕ್ಷಕ ಜಗದೀಶ ಎಸ್.ಎಚ್, ಟಿ.ಎಸ್ ಆಲಗೂರ, ಎಸ್.ಆರ್ ನಡಗಡ್ಡಿ, ನಂದೀಪ ರಾಠೋಡ, ನಿಜಣ್ಣಾ ಕಾಳೆ, ಭೀಮನಗೌಡ ಬಿರಾದಾರ, ಭೀಮಾಶಂಕರ ಬೈರಜಿ, ಮಹಾಂತೇಶ ಅವರಾಧಿ, ಕಲ್ಲನಗೌಡ ಬಿರಾದಾರ, ಹಣಮಂತ ಅರವತ್ತು ಮತ್ತಿತರಿದ್ದರು.