ದೊಡವಾಡದಲ್ಲಿ ಇಂಚಗೇರಿ ಸಂಪ್ರದಾಯದ ಆಧ್ಯಾತ್ಮ ಸಪ್ತಾಹ ಮಂಗಲ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದಲ್ಲಿರುವ ಶ್ರೀ ಸಮರ್ಥ ಸದ್ಗುರು ಶಿವಪ್ರಭು ಮಹಾರಾಜರು ಸ್ಥಾಪಿಸಿದ ಶ್ರೀ ಸಮರ್ಥ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆದೇಶದಂತೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳ ಸ್ಮರಣಾರ್ಥ ಆಧ್ಯಾತ್ಮ ಸಪ್ತಾಹ ಶುಕ್ರವಾರ ಪ್ರಾರಂಭವಾದ ಆಧ್ಯಾತ್ಮ ಸಪ್ತಾಹ ಶನಿವಾರ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದದ ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಂಡಿತು.
ಈ ಆಧ್ಯಾತ್ಮ ಸಪ್ತಾಹದಲ್ಲಿ ಗೋಪಾಲ ಮುರಗೋಡ ಮಹಾರಾಜರು, ಕಾಡಸಿದ್ದ ಮುರಗೋಡ ಮಹಾರಾಜರು. ಶಂಕರಪ್ಪ ಮಹಾರಾಜರು, ಸಂಗಪ್ಪ ಧರಿಗೌಡ ಮಹಾರಾಜರು, ಶಟ್ಟೆಪ್ಪ ಮಹಾರಾಜರು, ಸುಭಾಷ ಮಹಾರಾಜರು, ಗಿರಮಲ್ಲಪ್ಪ ಬೆಳವಡಿ ಹಾಗೂ ಹುಬ್ಬಳ್ಳಿಯಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಹೊರಟ ಶ್ರೀ ಮಾಧವ ರಥೋತ್ಸವದ ಸರ್ವೋದಯ ಪಾದಯಾತ್ರಿಕರು ಹಾಗೂ ದೊಡವಾಡ ಗ್ರಾಮದ ಶ್ರೀಮಠದ ಸದ್ಭಕ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.